ಹೆಮ್ಮಾರಿ ಕೊರೊನಾಗೆ ಛೋಟಾ ರಾಜನ್ ಬಲಿ
ಛೋಟಾ ರಾಜನ್ ಗೆ ಏಪ್ರಿಲ್ 26ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಏಮ್ಸ್ ನಲ್ಲಿ ರಾಜನ್ ಗೆ ಹೈ ಲೆವೆಲ್ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿತ್ತು.
ಇದೀಗ ಛೋಟಾ ರಾಜನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಛೋಟಾ ರಾಜನ್ ನನ್ನು 2015ರ ಅಕ್ಟೋಬರ್ ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ಬಂಧಿಸಿದ್ದರು.
ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಛೋಟಾ ರಾಜನ್ ವಿರುದ್ಧ 20 ಕ್ಕೂ ಹೆಚ್ಚು ಪ್ರಕರಣಗಳು ವಿರುದ್ಧ ದಾಖಲಾಗಿವೆ.