ಅಪಘಾತವಾದ ಕಾರ್ ನಲ್ಲಿ ನಾನು ಇರಲಿಲ್ಲ ಎಂದ ಲಕ್ಷ್ಮಣ ಸವದಿ ಪುತ್ರ
ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಅವರು ಪ್ರಯಾಣಿಸುತ್ತಿದ್ದ ಕಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ.. ಆದ್ರೆ ಡಿಸಿಎಂ ಪುತ್ರ ಚಿದಾನಂದ ಸವದಿ ಈ ಬಗ್ಗೆ ಮಾತನಾಡಿ ಅಪಘಾತವಾದ ಕಾರಿನಲ್ಲಿ ತಾನು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.. ಜೊತೆಗೆ ಆಕಸ್ಮಿಕವಾಗಿ ಕಾರಿಗೆ ಅವರು ಅಡ್ಡ ಬಂದಿದ್ದರಿಂದ ಅಪಘಾತವಾಗಿದೆ. ಅಪಘಾತಕ್ಕೀಡಾದ ಕಾರ್ ನಲ್ಲಿ ನಾನು ಇರಲಿಲ್ಲ ಎಂದು ಚಿದಾನಂದ ಸವದಿ ಸ್ಪಷ್ಟಪಡಿಸಿದ್ದಾರೆ.
ನನ್ನ ಕಾರನ್ನು ಚಾಲಕ ಚಲಾಯಿಸುತ್ತಿದ್ದು, ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ನಾನು ಬೇರೆ ಸ್ನೇಹಿತರೊಂದಿಗೆ 30 ಕಿಲೋಮೀಟರ್ ದೂರದಲ್ಲಿ ಪ್ರಯಾಣಿಸುತ್ತಿದ್ದೆ. ಘಟನೆಯ ವೇಳೆ ನಾನು ಇರಲಿಲ್ಲ. ಅಪಘಾತದ ನಂತರ ಚಾಲಕ ಮಾಹಿತಿ ತಿಳಿಸಿದ ಕೂಡಲೇ ಸ್ಥಳಕ್ಕೆ ತೆರಳಿ ಆಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ನಾನೇ ದಾಖಲಿಸಿದ್ದೇನೆ. ಸ್ಥಳದಲ್ಲಿದ್ದವರೊಂದಿಗೆ ಮಾತನಾಡಿ, ಪೊಲೀಸರಿಗೂ ಮಾಹಿತಿ ನೀಡಿ ಬಂದಿದ್ದೇನೆ ಎಂದು ಹೇಳಿದ್ದಾರೆ.