ತಿರುಪತಿಗೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ..
ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್ವಿ ರಮಣ ಅವರು ಭಾನುವಾರ ಬೆಳಗ್ಗೆ ಕುಟುಂಬ ಸಮೇತ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದಕ್ಕೂ ಮುನ್ನ, ಮಹಾದ್ವಾರದ ಬಳಿ ಆಗಮಿಸಿದ ಸಿಜೆಐ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಮತ್ತು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ಶ್ರೀ ವೈವಿ ಸುಬ್ಬಾ ರೆಡ್ಡಿ, ಇಒ ಡಾ ಕೆ ಎಸ್ ಜವಾಹರ್ ರೆಡ್ಡಿ ಮತ್ತು ಹೆಚ್ಚುವರಿ ಇಒ ಶ್ರೀ ಎವಿ ಧರ್ಮಾ ರೆಡ್ಡಿ ಅವರು ಬರಮಾಡಿಕೊಂಡರು.
ವೆಂಕಟೇಶ್ವರನ ದರ್ಶನದ ನಂತರ, ಅವರಿಗೆ ”ವೇದಶೀರ್ವಚನಂ” ನೀಡಲಾಯಿತು, ನಂತರ ಅಂಜನಾದ್ರಿ – ಹನುಮಾನ್ ಜನ್ಮಸ್ಥಳದ ಕುರಿತು ಇತ್ತೀಚೆಗೆ ಬಿಡುಗಡೆಯಾದ ಪುಸ್ತಕದ ಜೊತೆಗೆ ”ತೀರ್ಥ ಪ್ರಸಾದ”ಗಳನ್ನು ಪ್ರಸ್ತುತಪಡಿಸಲಾಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಜೆಐ, ಸುಮಾರು ಎರಡು ವರ್ಷಗಳ ವಿರಾಮದ ನಂತರ ಯಾತ್ರಾರ್ಥಿಗಳಿಗೆ “ಸರ್ವ ದರ್ಶನ” ಪುನರಾರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
“ಭವಿಷ್ಯದಲ್ಲಿ ಕೋವಿಡ್ ತರಹದ ಕಾಯಿಲೆಗಳು ಎಂದಿಗೂ ಮರುಕಳಿಸದಂತೆ ನೋಡಿಕೊಳ್ಳಿ, ಜಗತ್ತಿನ ಒಳತಿಗಾಗಿ ನಾನು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದೆ” ಎಂದು ಅವರು ಹೇಳಿದರು.
ತಿರುಮಲ ದೇವವಸ್ಥಾನದ ಸುತ್ತಮುತ್ತಲಿನ ಸುಂದರ ವಾತಾವರಣ ಮತ್ತು ಸ್ವಚ್ಚತೆಗಾಗಿ ಇತ್ತೀಚಿನ ಕಾರ್ಯಗಳಿಗೆ ಟಿಟಿಡಿಯನ್ನು ಶ್ಲಾಘಿಸಿದರು.
Chief Justice of India NV Ramana offers prayers at Tirumala