ರಾಜ್ಯದಲ್ಲಿ ಮಳೆ ಅವಾಂತರ, ಸಿ ಎಂ ಜೊತೆ ಮಾತನಾಡಿದ ಮೋದಿ
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿದಿದ್ದು, ಸಾವಿರಾರು ಕೋಟಿ ನಷ್ಟವಾಗಿದೆ.
ರಾಜ್ಯದಲ್ಲಿ ನಡೆದಿರುವ ನೆರೆ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸವಿವ ಅಮಿತ್ ಶಾ ಅವರು ಫೋನ್ ಮುಖಾಂತರ ಮಾತನಾಡಿದ್ದು, ವರದಿ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಎಂ ‘ಇಂದು ಬೆಳಿಗ್ಗೆ ಮೋದಿಯವರು ದೂರವಾಣಿ ಮೂಲಕ ಮಾತನಾಡಿ ಮಳೆಯಿಂದಾದ ಸಾವು ನೋವು ಬೆಳೆಹಾನಿಯ ಬಗ್ಗೆ ವಿಚಾರಿಸಿದ್ದಾರೆ. ಯಾವುದೇ ರೀತಿಯ ಸಹಾಯಕ್ಕೆ ಕೇಂದ್ರ ಸರ್ಕಾರ ಸಿದ್ದವಾಗಿದೆ ಎಂದು ಭರವಸೆ ನೀಡಿದರು’, ಎಂದು ತಿಳಿಸಿದರು.
ನಿನ್ನೆ ಕೋಲಾರದಲ್ಲಿ ಮಳೆ ಪಿಡಿತ ಪ್ರದೇಶಗಳಿಗೆ ಬೇಟಿ ನೀಡಿದ್ದ ಸಿ ಎಂ ಇಂದು ಬೆಂಗಳೂರಿನ ಯಲಹಂಕ ಸೇರಿದಂತೆ ಹಲವು ಏರಿಯಗಳಿಗೆ ಬೇಟಿ ನೀಡಲಿದದ್ದಾರೆ. ಯಲಹಂಕ ಕೆರೆ ಕೋಡಿ ಹೊಡೆದು ಅಪಾರ್ಟ್ ಮೆಂಟ್ ಸೇರಿದಂತೆ ಸಾವಿರಾರು ಮನೆಗಳಿಗೆ ನೀರು ನುಗ್ಗಿವೆ.








