10 ರೂ. ಬಿರಿಯಾನಿಗಾಗಿ ಮುಗಿಬಿದ್ದ ಜನ : ಕೊನೆಗೆ ಆಗಿದ್ದೇನು ಗೊತ್ತಾ..!
ತಮಿಳುನಾಡು: ಚಿಕನ್ ಬಿರಿಯಾನಿ ನಾನ್ ವೆಜಿಟೇರಿಯನ್ಸ್ ಗೆ ಫೇವರೇಟ್… ಆದ್ರೆ ಬಿರಿಯಾನಿ ರೇಟ್ ಸಿಕ್ಕಾಪಟ್ಟೆ ಕಾಸ್ಟ್ಲಿ… ಕನಿಷ್ಠ ಅಂದ್ರೂ 50-60 ರೂಪಾಯಿ ಇರುತ್ತೆ. ಅದಕ್ಕಿಂತ ಕಡಿಮೆ ಬಹುಶಃ ಎಲ್ಲೂ ಸಿಗೋದಿಲ್ಲ. ಹೀಗೇನಾದ್ರೂ ಅಂದ್ಕೊಂಡಿದ್ರೆ ನೀವಂದುಕೊಂಡಿರೋದು ತಪ್ಪು.. ಯಾಕೆ ಗೊತ್ತಾ… ಇಲ್ಲೊಂದ್ ಕಡೆ ಕೇವಲ 10 ರೂಪಾಯಿಗೆ ಬಿರಿಯಾನಿ ಹಂಚಲಾಗಿದೆ….. ಎಸ್ ಇದೇನಪ್ಪಾ 10 ರೂಪಾಯಿಗೆ ಇದ್ಯಾವ ಬಿರಿಯಾನಿ ಕಣಪ್ಪ… ಅನ್ನೋ ಅನುಮಾನ ಆಶ್ಚರ್ಯ ಸಹಜ.. ಆದ್ರೆ ಇದು ನಿಜ…
ತಮಿಳುನಾಡಿನ ಕೊಟ್ಟಾಯಿನಲ್ಲಿ ಝಾಹೀರ್ ಉಸೇನ್ ಎಂಬ ಹೋಟೆಲ್ ನಲ್ಲಿ ಇಂತಹ ವಿಶೇಷ ಆಫರ್ ನೀಡಿದ್ದ ಮಾಲೀಕ.. ಹೌದು.. ಈ ಸಂಬಂಧ ಹೋಟೆಲ್ ಮಾಲೀಕ ಜಾಹೀರಾತನ್ನ ಸಹ ನೀಡಿದ್ದ… ಕೇವಲ ಬೆಳಿಗ್ಗೆ 11 ರಿಂದು 1 ಗಂಟೆ ತನಕ 10 ರೂಪಾಯಿಗೆ ಬಿರಿಯಾನಿ ಅಂತ ಜಾಹೀರಾತು ಹಾಕಿಸಿದ್ದ. ಹೇಳಿ ಕೇಳಿ 10 ರೂಪಾಯಿ ಬಿರಿಯಾನಿ ಅಂದ್ರೆ ಜನ ಹೇಗೆ ತುಂಬಿರುತ್ತಾರೆ ಅನ್ನೋದನ್ನ ಕೇಳ್ಬೇಕಾ.. ಜಾಹೀರಾತು ನೋಡಿ ಜನ ಸಾಗರವೇ ಹೋಟೆಲ್ ಮುಂದೆ ಗುಡ್ಡೆ ಹಾಕಿಕೊಂಡಿದ್ದರು. ಚೀಪ್ ರೇಟ್ ಬಿರಿಯಾನಿಗಾಗಿ ಮುಗಿಬಿದ್ದಿದ್ದರು.
‘ಭಾರತರತ್ನ’ ಪ್ರಶಸ್ತಿಗೆ ಸೋನಿಯಾ ಗಾಂಧಿ ಅರ್ಹರೇ : ನಿತೀಶ್ ಕುಮಾರ್..!
ಹೀಗೆ 2,500 ಸಾವಿರ ಪ್ಯಾಕೇಟ್ ಬಿರಿಯಾನಿ ಸೇಲ್ ಮಾಡೋ ಪ್ಲಾನ್ ನಲ್ಲಿದ್ದ ಹೋಟೆಲ್ ಮಾಲೀಕ. ಆದ್ರೆ ಆತನ ಪ್ಲಾನ್ ಕಂಪ್ಲೀಟ್ ಫೇಲ್ ಆಗಿತ್ತು.. ಹೌದು ಇಷ್ಟು ಚೀಪ್ ರೇಟ್ ನಲ್ಲಿ ಬಿರಿಯಾನಿ ಮಾಡಿದ್ರೂ ಯಾಕ್ ಪ್ಲಾನ್ ವರ್ಕೌಟ್ ಆಗ್ಲಿಲ್ಲ ಅಂದ್ರಾ… ಅದಕ್ಕೆ ಕಾರಣ ನೂರಾರು ಗ್ರಾಹಕರನ್ನ ಈ ಕೊರೊನಾ ಟೈಮ್ ನಲ್ಲಿ ಒಟ್ಟಾಗಿ ಗುಡ್ಡಿ ಹಾಕಿಕೊಂಡಿದ್ದು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ದೇ ಬಿರಿಯಾನಿಗಾಗಿ ಮುಗಿಬಿದ್ದಿದ್ದು.
ಹೌದು ಹೋಟೆಲ್ ಮುಂದೆ ಬಂದ ಪೊಲೀಸರು ಕೊರೊನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಜಂಗುಳಿ ಸೇರಿದ್ದ ಕಾರಣ ಹೋಟೆಲ್ ಮಾಲೀಕನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದರು. ಇತ್ತ ಅರ್ಧಂಬರ್ಧ ಜನರಿಗೆ ಮಾತ್ರವೇ ಬಿರಿಯಾನಿ ಸಿಕ್ಕಿ ಇನ್ನುಳಿದವರು ಬಿರಿಯಾನಿ ಸಿಗದೇ ನಿರಾಸೆಯಾಗಿ ಮನೆಗೆ ಹೋದ್ರು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








