Chikkaballapur | ಜಿಲ್ಲೆಯಲ್ಲಿ ಮತ್ತೊಮ್ಮೆ ದಲಿತರ ಮೇಲೆ ಹಲ್ಲೆ
ಚಿಕ್ಕಬಳ್ಳಾಪುರ : ಉಳ್ಳೇರಹಳ್ಳಿಯ ದಲಿತರ ಮೇಲಿನ ಹಲ್ಲೆಯ ಘಟನೆ ಮಾಸುವ ಮುನ್ನವೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ 11 ವರ್ಷದ ಯಶ್ವಂತ ಎಂಬ ಬಾಲಕನನ್ನು ಸವರ್ಣೀಯರು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಯಶವಂತ್ ಹಲ್ಲೆಗೊಳಗಾದ ಬಾಲಕ
ಗ್ರಾಮದ ನಾಗರಾಜ್ ಎಂಬುವರ ಮಗಳ ಕಿವಿಯ ಓಲೆ ಕದ್ದಿದ್ದಾನೆ ಎಂದು ಆರೋಪಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸವರ್ಣಿಯರಾದ ನಾರಾಯಣಸ್ವಾಮಿ, ನವೀನ, ನಂಜೆಗೌಡ, ಹರೀಶ್, ನಾಗರಾಜ್ ಸೇರಿದಂತೆ ಹಲವರು ಹಿಗ್ಗಾಮುಗ್ಗ ಥಳಿಸಿ ವಿಕೃತಿ ಮೆರೆದಿದ್ದಾರೆ.
ಘಟನೆಯಲ್ಲಿ ಯಶವಂತ್ ಹಾಗೂ ಅತನ ತಾಯಿ ಗಂಭೀರ ಗಾಯಗೊಂಡು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.