Chikkaballapur | ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು
ಚಿಕ್ಕಬಳ್ಳಾಪುರ : ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ರಾಮಚಂದ್ರಾಪುರದಲ್ಲಿ ನಡೆದಿದೆ.
ಸದ್ಯ ನೀರಿನಿಂದ 29 ವರ್ಷದ ನರೇಶ್ ಬಾಬು ಅವರ ಮೃತ ದೇಹವನ್ನು ಹೊರತೆಗೆಯಲಾಗಿದೆ.
ಮತ್ತೊಬ್ಬರಿಗಾಗಿ ಎನ್ ಡಿಆರ್ ಎಫ್ ತಂಡ ಶೋಧ ಕಾರ್ಯ ಮುಂದುವರೆದಿದೆ.

ಮತ್ತೋರ್ವ ವೈದ್ಯಕೀಯ ವಿದ್ಯಾರ್ಥಿ ಸಚ್ಚಿದಾನಂದ ಬಾಬು ಶವಕ್ಕಾಗಿ ತೀವ್ರ ಹುಡುಕಾಟ ಮುಂದುವರೆಸಲಾಗಿದೆ.
ನೆನ್ನೆ ಸಂಜೆ ಶ್ರೀನಿವಾಸ ಸಾಗರದ ಕೆಳಗೆ ನೀರಿನ ಹೊಂಡದಲ್ಲಿ ಈ ಘಟನೆ ನಡೆದಿದೆ.
ಹೊಂಡದ ನೀರಿನಲ್ಲಿ ಮುಳುಗುತ್ತಿದ್ದ ಸಚ್ಚಿದಾನಂದರನ್ನ ರಕ್ಷಿಸಲು ಹೋಗಿದ್ದ ನರೇಶ್ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








