ಚಿಕ್ಕಬಳ್ಳಾಪುರ: ಚಿಕ್ಕಬಳ್ಲಾಪುರದಲ್ಲಿ ಇಂದು ಕೊರೊನಾ ಸ್ಪೋಟವಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ 42 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,764ಕ್ಕೆ ಏರಿಕೆಯಾಗಿದೆ. ಇನ್ನೂ ಈವರೆಗೂ ಕಿಲ್ಲರ್ ಕೊರೊನಾಗಿ ಜಿಲ್ಲೆಯಲ್ಲಿ ಬಲಿಯಾದದವರ ಸಂಖ್ಯೆ 48ಕ್ಕೇರಿದೆ.
ಈವರೆಗೂ ಜಿಲ್ಲೆಯಲ್ಲಿ 2,086 ಮಂದಿ ಗುಣಮುಖರಾಗಿದ್ದರೆ, 629 ಸಕ್ರಿಯ ಕೇಸ್ ಗಳಿವೆ. ಇನ್ನೂ ದಿನೇ ದಿನೇ ಸೋಂಕಿತರ ಪ್ರಮಾಣದಲ್ಲಿ ಕ್ರಮೇಣವಾಗಿ ಏರಿಕೆಯಾಗುತ್ತಲೇ ಇರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.