ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಓಟ ಮುಂದುವರೆದಿದೆ. ಒಂದೇ ದಿನದಲ್ಲಿ ಕೊರೊನಾ ಸ್ಫೋಟವಾಗಿದ್ದು, 24 ಗಂಟೆಗಳಲ್ಲಿ 58 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಕಿಲ್ಲರ್ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,962ಕ್ಕೇರಿದೆ. ಇಲ್ಲಿವರೆಗೂ ಜಿಲ್ಲೆಯಲ್ಲಿ ಒಟ್ಟು 40 ಜನರು ಮೃತಪಟ್ಟಿದ್ದಾರೆ. ಗುಣಮುಖರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 1,274 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಗೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 648 ಸಕ್ರಿಯ ಕೇಸ್ ಗಳಿವೆ. ಜಿಲ್ಲೆಯಲ್ಲಿ ಸೋಮವಾರದವರೆಗೆ 44,538 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು, ಈ ಪೈಕಿ 42,405 ಮಂದಿ ವರದಿ ನೆಗೆಟಿವ್ಬಂದಿದೆ. ದಿನೇ ದಿನೇ ವಿಶ್ವವಾಪ್ತಿ ತನ್ನ ಕಬಂದ ಬಾಹುವನ್ನ ಚಾಚುತ್ತಲೇ ಇರುವ ಹೆಮ್ಮಾರಿ ಹಾವಳಿಗೆ ದೇಶದ ಜನರೂ ತತ್ತರಿಸಿಹೋಗಿದ್ದಾರೆ. ರಾಜ್ಯದಲ್ಲೂ ಈಗಾಗಲೇ ಸೋಂಕಿತರ ಸಂಖ್ಯೆ ಲಕ್ಷದ ಗಡಿ ಮೀರಿದ್ದು, ಪ್ರತಿ ಜಿಲ್ಲೆಗಳಲ್ಲೂ ಕೊರೊನಾ ಬಂದೊಕ್ಕರಿಸಿದೆ.
ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ
ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...








