Chikkaballapur | ಕೋಲಾರದಿಂದ ಬೇರ್ಪಟ್ಟ ಕೋಚಿಮುಲ್ ಹಾಲು ಒಕ್ಕೂಟ
1 min read
Chikkaballapura-district-co-operative-milk-producers-union-limited-kochimul saaksha tv
Chikkaballapur | ಕೋಲಾರದಿಂದ ಬೇರ್ಪಟ್ಟ ಕೋಚಿಮುಲ್ ಹಾಲು ಒಕ್ಕೂಟ
ಚಿಕ್ಕಬಳ್ಳಾಪುರ : ಕೋಲಾರದಿಂದ ಕೋಚಿಮುಲ್ ಹಾಲು ಒಕ್ಕೂಟ ಬೇರ್ಪಟ್ಟು, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಪ್ರಕ್ರಿಯೆ ಆರಂಭವಾಗಿದೆ.
ನೂತನ ಒಕ್ಕೂಟ ರಚನೆಗೆ ರಾಜ್ಯ ಸರ್ಕಾರದಿಂದ ಆದೇಶ ಬಂದಿದೆ.
ಅದರಂತೆ ಪ್ರತ್ಯೇಕ ಹಾಗೂ ನೂತನ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ರನ್ನು ಆಡಳಿತಾಧಿಕಾರಿ ಯಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್ )ಆಗಿತ್ತು.
ಈಗ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಆಗಿ ಪ್ರತ್ಯೇಕವಾಗಿದೆ.
ನಂದಿ ಕ್ರಾಸ್ ನಲ್ಲಿರುವ ಮೆಗಾ ಡೈರಿಯಲ್ಲಿನ ಆಡಳಿತ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.