Chikkaballapur | ಸಿಕ್ಕ ಸಿಕ್ಕವರ ಲಾಂಗ್ ಬೀಸಿದ್ದವನ ಬಂಧನ
ಚಿಕ್ಕಬಳ್ಳಾಪುರ : ನಗರದ ರಸ್ತೆಗಳಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಾಪೂಜಿ ನಗರದ ನಿವಾಸಿ ಅರ್ಜುನ್ ಬಂಧಿತ ಆರೋಪಿಯಾಗಿದ್ದಾನೆ.
ನಿನ್ನೆ ಬೈಕ್ ನಲ್ಲಿ ನಗರದಲ್ಲಿ ರೌಂಡ್ಸ್ ಹಾಕಿದ್ದ ಆರ್ಜುನ್, ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿದ್ದ.
ಇದರಿಂದ 7 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕೀತ್ಸೆ ಪಡೆಯುತ್ತಿದ್ದಾರೆ.

ಮೂವರು ಮಹಿಳೆಯರು ನಾಲ್ಕು ಜನ ಪುರುಷರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಮುನಿರೆಡ್ಡಿ ಎನ್ನುವವರ ಸ್ಥಿತಿ ಚಿಂತಾಜನಕವಾಗಿದೆ.
ಇನ್ನು ನಿನ್ನೆ ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಕಳವಾರದ ದೇವಸ್ಥಾನದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ವೇಳೆ ಆರೋಪಿ ಬಳಿದ್ದ ಚಾಕು ಮಚ್ಚು ಲಾಂಗ್ ಗಳು ಸೇರಿ ಬೈಕ್ ಜಪ್ತಿ ಮಾಡಲಾಗಿದೆ.








