Chikkamagalur | ನಿಶ್ಚಿತಾರ್ಥಕ್ಕೆ ಸಾಕಿದ ಹಸುವನ್ನೇ ಬಲಿಕೊಟ್ಟ ತಂದೆ!
ಚಿಕ್ಕಮಗಳೂರಿನ ಈಚಿಕೆರೆ ಗ್ರಾಮದಲ್ಲಿ ಘಟನೆ
ನಿಶ್ಚಿತಾರ್ಥದ ಊಟಕ್ಕೆ ಸಾಕಿದ್ದ ಹಸುವಿನ ಬಲಿ
ಎನ್ ಆರ್ ಪುರ ಪೊಲೀಸರ ದಿಢೀರ್ ದಾಳಿ
ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಚಿಕ್ಕಮಗಳೂರು : ನಿಶ್ಚಿತಾರ್ಥದ ಊಟಕ್ಕೆಂದು ಕುಟುಂಬವೊಂದು ಸಾಕಿದ ಹಸವನ್ನೆ ಕಡಿದು ಊಟ ತಯಾರಿಸಿದಂತಹ ಅಮಾನವೀಯ ಘಟನೆ ಚಿಕ್ಕಮಗಳೂರಿನ chikkamagalore ಎನ್ ಆರ್ ಪುರ ತಾಲೂಕಿನ ಈಚಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೋಷನ್ ಎಂಬುವರ ಮನೆಯಲ್ಲಿ ನಿಶ್ಚತಾರ್ಥ ಕಾರ್ಯಕ್ರಮದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಬಲಿ ಕೊಟ್ಟಿದ್ದಾರೆ.
ಈ ವಿಷಯ ತಿಳಿದ ಎನ್ ಆರ್ ಪುರ ಪೊಲೀಸರು ದಾಳಿ ಮಾಡಿದ್ದಾರೆ.
ಹಸುವನ್ನು ಕಡಿದು ಮಾಂಸ ಬೇರ್ಪಡಿಸುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಮೂವರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.