ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ 14 ದಿನಗಳ ಬಳಿಕ ಪ್ರತ್ಯಕ್ಷ…
ಸತ್ತೇ ಹೋಗಿದ್ದಾನೆ ಎಂದು ಭಾವಿಸಿ ವ್ಯಕ್ತಿ 14 ದಿನಗಳ ಬಳಿಕ ಊರಲ್ಲಿ ಓಡಾಡಿಕೊಂಡಿರುವ ವಿಚಿತ್ರ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಸುರೇಶನನ್ನ ಕಂಡು ಸ್ಥಳಿಯರು ಶಾಕ್ ಆಗಿದ್ದಾರೆ.
14 ದಿನಗಳ ಹಿಂದೆ ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಸುರೇಶ್ ಕೊಚ್ಚಿ ಹೋಗಿದ್ದರು. ರಣ ಮಳೆ ಮಧ್ಯೆಯೂ ಸುರೇಶ್‍ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಶೋಧ ಕಾರ್ಯ ನಡೆಸಿ ಸುಸ್ತಾಗಿ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಇದೀಗ 14 ದಿನಗಳ ಬಳಿಕ ಈ ವ್ಯಕ್ತಿ ನಗರದಲ್ಲಿ ಪ್ರತ್ಯಕ್ಷವಾಗಿ ಓಡಾಡುತ್ತಿದ್ದಾರೆ. ಇದನ್ನು ಕಂಡ ನಗರಸಭೆ ಅಧ್ಯಕ್ಷ ವೇಣು ಗೋಪಾಲ್ ಅವರು ಸುರೇಶ್ಗೆ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಎಲ್ಲಿದ್ದಿ, ಅಧಿಕಾರಿಗಳಿಗೆ ಮಾಹಿತಿಯನ್ನಾದರೂ ನೀಡಬಹುದಿತ್ತು ಎಂದು ಗರಂ ಆಗಿದ್ದಾರೆ. ಸತ್ತಿದ್ದಾನೆಂದು ತಿಳಿದ ವ್ಯಕ್ತಿ ಬದುಕಿ ಬಂದಿರುವುದಕ್ಕೆ ಆತನ ಕುಟುಂಬಸ್ಥರು ಮತ್ತು ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
man who thought he was dead suddenly appeared in chikkamagaluru








