ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಒಂದೇ ದಿನ ಒಟ್ಟು 97 ಜನರಿಗೆ ಮಹಾಮಾರಿ ಒಕ್ಕರಿಸಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3248ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 146 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಜಿಲ್ಲೆಯಲ್ಲಿನ್ನು 990 ಸಕ್ರಿಯ ಕೇಸ್ ಗಳಿವೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 61 ಜನರು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನೂ ಸೋಂಕಿತರ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 22, ತರೀಕೆರೆಯಲ್ಲಿ 16, ಕಡೂರಿನಲ್ಲಿ 42, ಮೂಡಿಗೆರೆಯಲ್ಲಿ 3, ನರಸಿಂಹರಾಜಪುರದಲ್ಲಿ 4, ಶೃಂಗೇರಿಯಲ್ಲಿ 6, ಕೊಪ್ಪದಲ್ಲಿ 4 ಕೇಸ್ ಗಳು ವರದಿಯಾಗಿವೆ.