ಒಂದೆಡೆ ಮಾರಕ ಕೊರೋನಾ ವೈರಸ್ ದೇಶಕ್ಕೆ ಯಾವ ಮಾರ್ಗದಲ್ಲಿ ಕಾಲಿಡುತ್ತೋ ಎಂಬ ಆತಂಕವಿದೆ. ಈ ನಡುವೆ ಚಿಕ್ಕಮಗಳೂರಿಗೆ ಮಂಗನ ಜ್ವರ ಬರ ಸಿಡಿಲಿನಂತೆ ಅಪ್ಪಳಿಸಿದೆ. ಕಳೆದ ಭಾನುವಾರ ಸಾಗರ ತಾಲೂಕಿನ ಹೊಡಂತೆ ಗ್ರಾಮದಲ್ಲಿ ಮಂಗನ ಸಾವಿನ ಪ್ರಕರಣ ನಂತರ ಅದೇ ಪ್ರದೇಶದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಜಿಲ್ಲೆಯ ಎನ್ ಆರ್ ಪುರ ತಾಲೂಕಿನಲ್ಲಿ ಬೆಳಕಿಗೆ ಬಂದ ಮಂಗನ ಜ್ವರ, ಮಡಬಾರು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರಲ್ಲಿ ಪತ್ತೆಯಾಗಿ ಆತಂಕ ಮೂಡಿಸಿದೆ. ಕೂಡಲೇ ಸೋಂಕಿತರನ್ನು ಚಿಕಿತ್ಸೆಗಾಗಿ ಮಧ್ಯಪ್ರದೇಶಕ್ಕೆ ಕರೆದೊಯ್ಯಲಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಮಂಗನಜ್ವರ ಕಂಡು ಬಂದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲರಿಗೂ ಉಚಿತ ಔಷಧಿ ನೀಡಲಾಗ್ತಿದೆ. ಇನ್ನು ಮಂಗ ಸತ್ತ ಕೂಡಲೇ ಯಾರೂ ಗಾಬರಿಪಡುವ ಅಗತ್ಯವಿಲ್ಲ, ಬದಲಿಗೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ, ಅಲ್ಲಿ ಮಲಥಿಯಾನ್ ಪುಡಿಗಳನ್ನು ಹಾಕಲಾಗುವುದು ಎಂದು ಡಾ ವೀರಪ್ರಸಾದ್ ತಿಳಿಸಿದ್ದು. ಈಗಾಗಲೇ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಸಾಕಷ್ಟು ಔಷಧಿಯನ್ನ ಪೂರೈಸಲಾಗಿದೆ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’
ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...








