ಇಂದು ಮದುವೆಯಾಗಬೇಕಿದ್ದ ಯುವಕ ಕೊರೊನಾಗೆ ಬಲಿ
ಚಿಕ್ಕಮಗಳೂರು : ಮದುವೆಮನೆಯಲ್ಲಿ ಸಂತೋಷದ ಬದಲಾಗಿ ಸಾವಿನ ದುಃಖ ಮಡುಗಟ್ಟಿದೆ.
ಇಂದು ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕಿದ್ದ 32 ವರ್ಷದ ವರ ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.
ಪೃಥ್ವಿರಾಜ್ ಮೃತ ಯುವಕನಾಗಿದ್ದಾನೆ. ಬೆಂಗಳೂರಿನಿಂದ 10 ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಯುವಕನಿಗೆಕೊರೊನಾ ಪಾಸಿಟಿವ್ ಆಗಿರುವುದು ದೃಢವಾಗಿತ್ತು.
ಬಳಿಕ ಆತನಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.








