ತಂದೆಯ ಮೇಲಿನ ದ್ವೇಷಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ..!
ಚಿಕ್ಕಮಗಳೂರು: ತಂದೆಯ ಮೇಲಿನ ಸೇಡಿನಿಂದಾಗಿ ಆತನ ಅಪ್ರಾಪ್ತ ಮಗಳ ಮೇಲೆ ಕಿರಾತಕನೋರ್ವ ಅತ್ಯಾಚಾರವೆಸಗಿರುವ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಮಹೇಶ್7 ತಿಂಗಳ ಹಿಂದೆ ಬಾಲಕಿಯ ತಂದೆಯ ಬಳಿ ಹಿಟಾಚಿ ಡ್ರೈವರ್ಆಗಿ ಕೆಲಸ ನಿರ್ವಹಿಸುತ್ತಿದ್ದ. ಕೆಲಸಕ್ಕೆ ಬರುವ ಸಂದರ್ಭ ಮಗಳ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿ ಆತನಿಗೆ ಎಚ್ಚರಿಕೆ ನೀಡಿ ಕೆಲಸದಿಂದ ತೆಗೆದು ಹಾಕಲಾಗಿತ್ತು.
ಮಾನವೀಯತೆ ಇಲ್ಲದವರು, ಪುಟ್ಟ ಕಂದಮ್ಮಗಳನ್ನ ವಸ್ತುಗಳ ರೀತಿ ಮಾರಾಟ..!
ಇದೇ ದ್ವೇಷಕ್ಕೆ ಫೆಬ್ರವರಿ 26ರಂದು ಬಾಲಕಿಯ ಜೊತೆ ದೂರವಾಣಿ ಮೂಲಕ ಸಂಪರ್ಕ ಬೆಳಸಿ ಆಕೆಯನ್ನ ಪುಸಲಾಯಿಸಿ ಹೋಮ್ ಸ್ಟೇಗೆ ಕರೆದೊಯ್ದು ಮತ್ತು ಪದಾರ್ಥವನ್ನ ಆಹಾರದಲ್ಲಿ ಕೊಟ್ಟು ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಮನೆಗೆ ವಾಪಸ್ ಆಗಿದ್ದ ಬಾಲಕಿಯ ನಡೆವಳಿಕೆ ಬದಲಾಗಿದ್ದನ್ನ ಗಮನಿಸಿ ಆಕೆಯನ್ನ ವಿಚಾರಿಸಿದಾಗ ನಡೆದ ಸತ್ಯವನ್ನ ತಂದೆ ತಾಯಿ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣವೇ ಈ ಬಗ್ಗೆ ಪೊಲೀಸ್ ಠಾಣೆಗೆ ಸಂತ್ರಸ್ತ ಬಾಲಕಿಯ ಪೋಷಕರು ದೂರು ನೀಡಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.








