chikkanna
ಚಂದನವನದಲ್ಲಿ ಹಾಸ್ಯ ಕಲಾವಿಧರಾಗಿ ಜನರನ್ನ ಮನೋರಂಜಿಸಿ ಅನೇಕರು ಬಳಿಕ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ. ಇದಕ್ಕೆ ನಟ ಕೋಮಲ್, ಶರಣ್ ರಾಜ್ ಹೊರತಾಗಿಲ್ಲ. ಇದೀಗ ಈ ಸಾಲಿಗೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಚಿಕ್ಕಿ ಅಲಿಯಾಸ್ ಚಿಕ್ಕಣ್ಣ ಸೇರಿಕೊಂಡಿದ್ದಾರೆ.
ಹೌದು ಚಿಕ್ಕಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಚಿಕ್ಕಣ್ಣ ನಾಯಕನಟನಾಗಿ ಮಿಂಚಲು ರೆಡಿಯಾಗಿದ್ದಾರೆ. ಹೊಸ ಸಿನಿಮಾದ ಮೂಲಕ ಕಾಮಿಡಿ ಕಿಲಾಡಿ ಈಗ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಚಿಕ್ಕಿ ನಾಯಕನಾಗಿ ಮಿಂಚುತ್ತಿರುವ ಹೊಸ ಟೈಟಲ್ ಇದೇ ಅಕಟೋಬರ್ 19ಕ್ಕೆ ರಿವೀಲ್ ಆಗಲಿದೆ. ಮೂಲಗಳ ಪ್ರಕಾರ ಈ ಸಿನಿಮಾಗೆ ಉಪಾಧ್ಯಕ್ಷ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗಿದೆ. ಇನ್ನೂ ಈ ವಿಚಾರ ಚಿಕ್ಕಿ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಅಲ್ಲದೇ ಈ ಚಿತ್ರದ ಮೂಲಕ ಹೊಸ ನಾಯಕಿಯನ್ನ ಚಂದನವನಕ್ಕೆ ಪರಿಚಯಿಸುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಸ್ಯಾಂಡಲ್ ವುಡ್ ನ ಟಾಪ್ ಹಾಸ್ಯನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ಎಂಥವರನ್ನೇ ಆಗಲಿ ತಮ್ಮ ಕಾಮಿಡಿ ಝಳಕ್ ನಿಂದಲೇ ಜನರನ್ನ ನಗಿಸಿ ಮನೊರಂಜಿಸುತ್ತಾರೆ. ಸದ್ಯ ಚಂದನವನದಲ್ಲಿ ಬಹುಬೇಡಿಕೆಯ ಕಾಮಿಡಿಯನ್ ಆಗಿರುವ ಚಿಕ್ಕಿ ಅಪಾರ ಸನಿಪ್ರಯರಿಯ ಫೇವರೆಟ್ ಆಗಿದ್ದಾರೆ.
ವೃತ್ತಿ ಜೀವನ
ಮೈಸೂರಿನಲ್ಲಿ ದೃಶ್ಯ ಕಲಾವಿಧೆ ಕಾಮಿಡಿ ಶೋ ಮುಖಾಂತರ ತಮ್ಮ ವೃತ್ತಿ ಜೀವನವನ್ನ ಆರಂಭಿಸಿದ ಚಿಕ್ಕಿ 2011ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಚಿಕ್ಕಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಚಿಕ್ಜಕಣ್ಣ ಕಾಮಿಡಿ ಜೊತೆಗೆ ಹಾವ ಭಾವವನ್ನೂ ವಿಭಿನ್ನವಾಗಿ ಸಂರ‍್ಭಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಕಲಾ ನಿಪುಣತೆ ಜನರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಈ ಸಿನಿಮಾದ ಮೂಲಕ ಚಿಕ್ಕ ಸ್ಯಾಂಡಲ್ ವುಡ್ ನಲ್ಲಿ ಅಚ್ಚುಮೆಚ್ಚಿನ ಹಾಸ್ಯ ಕಲಾವಿದರಾಗಿ ಷಚಿರಪರಿಚಿತರಾದರು. ಬಳಿಕ ಅನೇಕ ಆಫರ್ ಗಳು ಚಿಕ್ಕಣ್ಣನನ್ನ ಹುಡುಕಿಕೊಂಡು ಬಂದಿದ್ವು. ಬಳಿಕ ಮತ್ತೆ 2013ರಲ್ಲಿ ಯಶ್ ನಟನೆಯ ರಾಜಾಹುಲಿ, 2014ರ ಶರಣ್ ಅವರ ನಟನೆಯ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಿ ನಟಿಸಿ ಜನರ ಫೇವರೆಟ್ ಆದರು. ಈ ಸಿನಿಮಾಗಳು ಚಿಕ್ಕಣ್ಣ ಅವರ ಖ್ಯಾತಿಗೆ ಮೈಲುಗಲ್ಲಾಗಿದ್ವು.
ಬಳಿಕ 2015ರಲ್ಲಿ ಚಿಕ್ಕಣ್ಣ ದಿಗಂತ್ ನಟನೆಯ ಶಾರ್ಪ್ ಶೂಟರ್ ಸಿನಿಮಾದಲ್ಲಿ ಕಾಣಿಸಿಕೊಮಡಿದ್ದರು. ಅಲ್ಲದೇ ಈ ಚಿತ್ರದ ಕುಂಟೆಬಿಲ್ಲೆ ಹಾಡಿಗೂ ಲಿರಿಕ್ಸ್ ಬರೆದಿದ್ದರು.
ತಮ್ಮನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಚಿರಂಜೀವಿ..!
ಚಿಕ್ಕಣ್ಣ ಕಿರಾತಕದಿಂದ ಚಂದನವನಕಗಕೆ ಲಗ್ಗೆ ಇಟ್ಟರು. ಬಳಿಕ 2012ರಲ್ಲಿ ಲಕ್ಕಿ , ಮಿಸ್ಟರ್ 420 , 2013ರಲ್ಲಿ ರಾಜಾಹುಲಿ, ದರ್ಶನ್ ಅಭಿನಯದ ಬುಲ್ ಬುಲ್, ಶರಣ್ ಅಭಿನಯದ ವಿಕ್ಟರಿಯಲ್ಲಿ ಮಿಂಚಿದ್ರು. 2014ರಲ್ಲಿ ನವರಂಗಿ , ಅಂಜದ ಗಂಡು, ಕ್ವಾಟ್ಲೆ ಸತೀಶ, ಸವಾರಿ 2, ಬಾಸು ಅದೇ ಹಳೆ ಕಥೆ, ಅಧ್ಯಕ್ಷ, ತಿರುಪತಿ ಎಕ್ಸ್ ಪ್ರೆಸ್, ಜಸ್ಟ್ ಲವ್ ನಲ್ಲಿ ಕಾಣಿಸಿಕೊಂಡಿದ್ರು. ನಂತರ 2015ರಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿಬಂದ ಚಂದ್ರಿಕಾ , ರುದ್ರ ತಾಂಡವ, ಬಾಂಬೆ ಮಿಠಾಯಿ, ರನ್ನ, ವಜ್ರಕಾಯ, ಸಪ್ನೋಂಕಿ ರಾಣಿ, ಮಿ. ಐರಾವತ, ರಾಮ್ ಲೀಲಾ, ರಥಾವರ, ಬೆಂಗಳೂರು 560023, ಶಾರ್ಪ ಶೂಟರ್ , ಮಾಸ್ಟರ್ ಪೀಸ್ ನಲ್ಲಿ ಮಿಂಚಿದರು. ಬಳಿಕ 2016ರಲ್ಲಿ ಮದುವೆಯ ಮಮತೆಯ ಕರೆಯೋಲೆ, ಮಸ್ತ್ ಮೊಹಬ್ಬತ್, ವಾಟ್ಸಾಪ್ ಲವ್, ಟೈಸನ್, ತಲೆ ಬಾಚ್ಕೊಳ್ಳಿ, ಪೌಡರ್ ಹಾಕೊಳ್ಳಿ, ಜಿಗರ್ ತಂಡ , ಇಷ್ಟಕಾಮ್ಯ, ದೊಡ್ಮನೆ ಹುಡುಗ, ನನ್ನ ನಿನ್ನ ಪ್ರೇಮ ಕಥೆ, ಕೋಟಿಗೊಬ್ಬ 2, ಹ್ಯಾಪಿ ಬರ್ತ್ ಡೇ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಚಂದನಬವನಕ್ಕೆ ಎಂಟ್ರಿಯಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಅತಿ ಹೆಚ್ಚು ಖ್ಯಾತಿ ಪಡೆದಿದ್ದಾರೆ ಚಿಕ್ಕಿ.
ಇನ್ನೂ ಕಳೆದ ಮೂರು ವರ್ಷಗಳು ಅಂದ್ರೆ 2017ರಿಂದ 2020ರವೆಗೂ ಹಲವಾರು ಹೈ ಬಜೆಟ್ ಹಾಗೂ ಸೂಪರ್ ಹಿಟ್ ಸಿನಿಮಾಗಲಲ್ಲಿ ಚಿಕ್ಕಿ ಅಧ್ಬುತ ನಟನೆ ಜನರನ್ನ ಮೋಡಿ ಮಾಡಿದೆ. ಹೆಬ್ಬುಲಿ, ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ, ಅಂಜನಿ ಪುತ್ರ ರಾಜ್ ವಿಷ್ಣು, ದಳಪತಿ, ಕನ್ನಡಕ್ಕಾಗಿ ಒಂದನ್ನ ಒತ್ತಿ, ರ‍್ಯಾಂಬೋ 2 , ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ, ಒಡೆಯ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಿ ಇದೀಗ ಇನ್ನೂ ಸಾಲು ಸಾಲು ಸಿನಿಮಾಗಲಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಪೊಗರು ಚಿತ್ರದಲ್ಲೂ ಚಿಕ್ಕಿ ಕಾಣಿಸಿಕೊಳ್ತಾಯಿದ್ದು, ಇದೀಗ ಹೀರೋ ಆಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.
ಅವಾರ್ಡ್ಸ್
ಚಿಕ್ಕಿ ತಮ್ಮ ಅದ್ಭುತ ನಟನೆಯಿಂದಾಗಿ ಅನೇಕ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಜಾಹುಲಿ, ಅಧ್ಯಕ್ಷ, ಮಾಸ್ಟರ್ ಪೀಸ್ ಸಿನಿಮಾಗಳಿಗಾಗಿ ಸೈಮಾ ಬೆಸ್ಟ್ ಕಮಿಡಿಯನ್ ಆಕ್ಟರ್ ಅವಾರ್ಡ್ ಪಡೆದುಕೊಂಡಿದ್ದಾರೆ.ಹಾಸ್ಯದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ‘ಚಿಕ್ಕಿ’ ಸಿನಿಜರ್ನಿ..!
chikkanna
ಲಾಕ್ ಡೌನ್ ಬಳಿಕ ನೇರವಾಗಿ ರಿಲೀಸ್ ಆಗುತ್ತಿರುವ ಕನ್ನಡದ ಹೊಸ ಸಿನಿಮಾ ಇದು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel