ಕನ್ನಡದಲ್ಲಿ ಕೋಮಲ್ ಕುಮಾರ್, ಶರಣ್ ಸಹ ಹಾಸ್ಯನಟನಾಗಿ ವೃತ್ತಿ ಜೀವನ ಆರಂಭಿಸಿದರೂ ಇಂದು ಸ್ಟಾರ್ ಹೀರೋಗಳು ಎನಿಸಿಕೊಂಡಿದ್ದಾರೆ. ಇದೀಗ, ಈ ಪಟ್ಟಿಗೆ ಹಾಸ್ಯ ನಟ ಚಿಕ್ಕಣ್ಣ ಸೇರಿದ್ದಾರೆ. ಸದ್ಯ ಕನ್ನಡದ ಬಹುಬೇಡಿಕೆಯ ಹಾಗೂ ದುಬಾರಿ ಹಾಸ್ಯ ನಟ ಆಗಿರುವ ಚಿಕ್ಕಣ್ಣ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಕ್ಟೋಬರ್ 19ರಂದು ಚಿಕ್ಕಣ್ಣ ಅವರ ನಾಯಕತ್ವದ ಹೊಸ ಸಿನಿಮಾದ ಟೈಟಲ್ ಘೋಷಣೆಯಾಗಲಿದೆ. ಮೂಲಗಳ ಪ್ರಕಾರ ಈ ಸಿನಿಮಾಗೆ ಈ ಚಿತ್ರಕ್ಕೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈವರೆಗೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಚಿತ್ರದಲ್ಲಿ ರವಿಶಂಕರ್, ರಾಕ್ಲೈನ್ ಸುಧಾಕರ್ ಸೇರಿದಂತೆ ಅನೇಕರ ತಾರಾಬಳಗವಿದೆ. ಈ ಚಿತ್ರದಲ್ಲಿ ಹೊಸ ನಾಯಕಿಯನ್ನ ಪರಿಚಯಿಸಲಾಗುತ್ತೆ ಎನ್ನಲಾಗಿದೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಒಳಗೊಂಡಿದೆ. ‘ಬಾಂಬೆ ಮಿಠಾಯಿ’, ‘ಡಬ್ಬಲ್ ಎಂಜಿನ್’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಚಂದ್ರಮೋಹನ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಬ್ಬುಲಿ, ರಾಬರ್ಟ್ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.








