Chikodi | ಅಪಘಾತದಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ
ಚಿಕ್ಕೋಡಿ : ರಸ್ತೆ ಅಪಘಾತಲ್ಲಿ ಮೃತಪಟ್ಟ ಬಿ ಎಸ್ ಎಫ್ ಯೋಧನ ಅಂತ್ಯಕ್ರಿಯೆ ಅವರ ಸ್ವ ಗ್ರಾಮದಲ್ಲಿ ನಡೆಯಿತು. ಪಶ್ಚಿಮಬಂಗಾಳದ ಪನಜೀಪರಾದ ಉತ್ತರ ದೀನಬಜಪುರ್ ನ ೧೫೨ ನೇ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೂರಜ್ ಸುತಾರ್ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು.
ನಿನ್ನೆಯ ದಿನ ಅವರ ಸ್ವ ಗ್ರಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.
ಕಳೆದ ೧೦ ವರ್ಷಗಳಿಂದ ಯೋಧ ಸೂರಜ್ ಭಾರತೀಯ ಸೈನ್ಯದಲ್ಲಿ ಸೇವ ಸಲ್ಲಿಸುತ್ತಿದ್ದರು.

ನಿನ್ನೆ ರೈಲ್ವೆ ನಿಲ್ದಾಣದಕ್ಕೆ ಹೋದ ಸಮಯದಲ್ಲಿ ರಸ್ತೆ ಕ್ರಾಸ್ ಮಾಡುವ ಸಂದರ್ಭ ಲಾರಿ ಡಿಕ್ಕಿಯಾಗಿ ಸೂರಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆ ಯೋಧನ ಸ್ವಗ್ರಾಮ ಯಡೂರುವಾಡಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಯೋಧನ ಪಾರ್ಥಿವ ಶರೀರ ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದಣ ಮುಗಿಲು ಮುಟ್ಟಿತ್ತು.
ಯೋಧನ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ್ ಮೃತ ಯೋಧನ ಪಾರ್ಥಿವ ಶರೀರ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮದ ಸ್ಮಶಾನ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಸೂರಜ್ ಸುತಾರ ಅಂತ್ಯಸಂಸ್ಕಾರ ನೆರವೇರಿತು.