ಮಕ್ಕಳ ಅಶ್ಲೀಲ ವಿಡಿಯೋ : ಟಾರ್ಗೆಟ್ ಬಡಮಕ್ಕಳೇ..! ಜಾಲದ ಹಿಂದೆ ಇದ್ದ ಇಂಜಿನಿಯರ್ ಪತ್ನಿ ಸೆರೆ..!
ಉತ್ತರಪ್ರದೇಶ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವರ ಅಶ್ಲೀಲ ವಿಡಿಯೋ ಸೆರೆ ಹಿಡಿದು ಅದನ್ನು ಅಶ್ಲೀಲ ವೆಬ್ ಸೈಟ್ ಗೆ ಮಾರಾಟ ಮಾಡುತ್ತಿದ್ದ ಇಂಜಿನಿಯರ್ ಒಬ್ಬನ ಪತ್ನಿಯೊಬ್ಬಳನ್ನ ಸಿಬಿಐ ಬಂಧಿಸಿದೆ. 50 ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ರೆಕಾರ್ಡ್ ಮಾಡಿ ಡಾರ್ಕ್ವೆಬ್ ಮೂಲಕ ಮಾರಾಟ ಮಾಡುತ್ತಿದ್ದ ಈಕೆ ನೀರಾವರಿ ಇಲಾಖೆಯ ಇಂಜಿನಿಯರ್ ಒಬ್ಬನ ಪತ್ನಿಯಂತೆ. ಕಳೆದ 10 ವರ್ಷಗಳಿಂದ ಈಕೆ ಇದನ್ನೇ ಕಸುಬು ಮಾಡಿಕೊಂಡು ಹಣ ಸಂಪಾದನೆ ಮಾಡಿದ್ದಾಳೆ.
ಬೆಂಗಳೂರಿಗೆ ವಕ್ಕರಿಸಿದ ಬ್ರಿಟನ್ ರೂಪಾಂತರಿ ಕೊರೊನಾ: ಮೂವರಿಗೆ ಸೋಂಕು ದೃಢ..?
ಚಿತ್ರಕೂಟ, ಹಮಿರ್ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದಾಳೆ. ಬಡ ಮಕ್ಕಳೇ ಈಕೆಯ ಟಾರ್ಗೆಟ್. ಬಡ ಮಕ್ಕಳಿಗೆ ಆಮಿಷ ಒಡ್ಡಿ ಕರೆದುಕೊಂಡು ಬಂದು ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಅದರ ವಿಡಿಯೋ ಮಾಡಿ ಪೋರ್ನ್ ವೆಬ್ಸೈಟ್ಗೆ ಮಾರಾಟ ಮಾಡಲಾಗುತ್ತಿತ್ತು. ಕೆಲವು ಪೋರ್ನ್ ವೆಬ್ಸೈಟ್ಗಳ ಮೇಲೆ ಸಿಬಿಐ ಕಣ್ಣು ಇಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಅನೇಕ ವಿಡಿಯೋಗಳಲ್ಲಿ ಸುಮಾರು 50 ಮಕ್ಕಳು ಕಾಣಿಸಿಕೊಂಡಿರುವುದು ತನಿಖಾಧಿಕಾರಿಗಳಿಗೆ ಕಾಣಿಸಿದೆ. ಇದರ ಬೆನ್ನಟ್ಟಿ ಹೋಗಿದ್ದ ಅವರಿಗೆ ರಾಮ್ಭವನ್ ಎಂಬ ಇಂಜಿನಿಯರ್ ಒಬ್ಬ ಇದರ ಹಿಂದೆ ಇರುವುದು ಗೊತ್ತಾಗಿದೆ.
ಬೆಂಗಳೂರಿಗೆ ವಕ್ಕರಿಸಿದ ಬ್ರಿಟನ್ ರೂಪಾಂತರಿ ಕೊರೊನಾ: ಮೂವರಿಗೆ ಸೋಂಕು ದೃಢ..?
ಕಳೆದ ತಿಂಗಳು ಇದೇ ಪ್ರಕರಣ ಸಂಬಂಧ ಇಂಜಿನಿಯರ್ ಅನ್ನು ಬಂಧಿಸಲಾಗಿತ್ತು. ಈಗ ಇಂಜಿನಿಯರ್ ಪತ್ನಿಯ ಕುತಂತ್ರ ಬಯಲಾಗಿದ್ದು ಆಕೆಯನ್ನ ಅರೆಸ್ಟ್ ಮಾಡಲಾಗಿದೆ. ಮಕ್ಕಳನ್ನು ಈ ಕೃತ್ಯಕ್ಕೆ ಬಳಸಿಕೊಂಡ ನಂತರ ಅವರಿಗೆ ಹಣ, ಉಡುಗೊರೆ, ಮೊಬೈಲ್ ಫೋನ್ ನೀಡಿ ಯಾರಿಗೂ ವಿಷಯ ತಿಳಿಸದಂತೆ ಹೇಳಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಸದ್ಯ ಇಂಜಿನಿಯರ್ ಹಾಗೂ ಆತನ ಪತ್ನಿ ಇದೀಗ ಜೈಲಿನಲ್ಲಿ ಪೊಲೀಸರ ಆತಿಥ್ಯ ಸ್ವೀಕರಿಸಸುತ್ತಿದ್ದಾರೆ. ಇನ್ನೂ ಇಂಜಿನಿಯರ್ ಮನೆಯಲ್ಲಿ ದಾಳಿ ನಡೆಸಿರೋ ಅಧಿಕಾರಿಗಳು ಸುಮಾರು 8 ಲಕ್ಷ ಹಣ, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ವೆಬ್-ಕ್ಯಾಮೆರಾ, ಪೆನ್ ಡ್ರೈವ್, ಮೆಮೊರಿ ಕಾರ್ಡ್ ಸೇರಿದಂತೆ ಡೇಟಾ ಸಂಗ್ರಹಿಸುವ ಹಲವು ಸಾಧನಗಳು ಹಾಗೂ ಲೈಂಗಿಕ ಆಟಿಗಳನ್ನ ವಶಪಡಿಸಿಕೊಂಡಿದ್ದಾರೆ.
ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು ಲೋಕಾರ್ಪಣೆ
ಧರ್ಮೇಗೌಡ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕರ ಸಂತಾಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel