ರಾಯಚೂರು: ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.
ರಾಯಚೂರು, ಸಿಂಧನೂರು, ಮಾನ್ವಿ, ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ಮೆಣಿಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ದೇವದುರ್ಗ ತಾಲೂಕು ಮೆಣಸಿನಕಾಯಿ ಬೆಳೆಯುವುದರಲ್ಲಿ ಅಗ್ರಸ್ಥಾನದಲ್ಲಿದೆ. ಅಂದಾಜು ಶೇ.50ರಷ್ಟು ಬೆಳೆಯನ್ನು ಇದೇ ತಾಲೂಕಿನಲ್ಲಿ ಬೆಳೆಯಲಾಗುತ್ತದೆ.
ಲಿಂಗಸುಗೂರು, ರಾಯಚೂರು, ಮಾನ್ವಿ ಹಾಗೂ ಸಿಂಧನೂರು ತಾಲೂಕುಗಳು ನಂತರದ ಸ್ಥಾನದಲ್ಲಿವೆ. ಐದಾರು ತಿಂಗಳಿಗೆ ಹಸಿ ಮೆಣಸಿನಕಾಯಿ, 6-8 ತಿಂಗಳಿಗೆ ಕಟಾವಿಗೆ ಬರುವ ಒಣ ಮೆಣಸಿನಕಾಯಿಗೆ ಕಳೆದ ವರ್ಷ ಉತ್ತಮ ಬೆಲೆ ದೊರೆತಿದ್ದರಿಂದ ಈ ಬೆಳೆಯತ್ತ ಜಿಲ್ಲೆಯಲ್ಲಿ ಹೆಚ್ಚು ಒಲವು ವ್ಯಕ್ತವಾಗುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳೆದಿರುವ ವಿಸ್ತೀರ್ಣ ಮತ್ತು ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ದರ ಇಳಿಯುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಕಳೆದ ವರ್ಷ ದರ ಪ್ರಮಾಣವೂ ಉತ್ತಮವಾಗಿದ್ದರಿಂದ ಈ ಬಾರಿ ಜಿಲ್ಲಾದ್ಯಂತ ಗುಂಟೂರು, ಬ್ಯಾಡಗಿ, ಸೂಪರ್ ಟೆನ್, ಎಂಡೊಫೈವ್, ಸಿಂಜೆಂಟಾ ಮುಂತಾದ ಹೆಸರಿನ ನಾನಾ ತಳಿಯ ಮೆಣಸಿನಕಾಯಿ ಬೆಳೆಯಲಾಗಿದೆ. ಬ್ಯಾಡಗಿ ತಳಿಗೆ ಕ್ವಿಂಟಲ್‌ಗೆ ಗರಿಷ್ಠ 62, 299 ರೂ. ದರ ದೊರೆತಿದ್ದರೆ ಗುರುವಾರ ಮಾರುಕಟ್ಟೆಯಲ್ಲಿ 32 ಸಾವಿರದ 700ರೂ. ದರ ಇದೆ. ಇದರಿಂದಾಗಿ ರೈತರು ಆತಂಕ








