ಬ್ರಿಟನ್ ನ ಚೀನಾ ರಾಯಭಾರಿ ಕಛೇರಿ ಎದುರು ಪ್ರತಿಭಟನೆ – ಆವರಣದ ಒಳಗೆ ಎಳೆದುಕೊಂಡು ಥಳಿತ…
ಯುನೈಟೆಡ್ ಕಿಂಗ್ ಡಮ್ ಮ್ಯಾಂಚೆಸ್ಟರ್ ಸಿಟಿಯ ರಾಯಭಾರಿ ಕಚೇರಿ ಹೊರೆಗೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರನ್ನ ಕಛೇರಿ ಆವರಣದ ಒಳಗೆ ಎಳೆದುಕೊಂಡು ಥಳಿಸಿರು ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನ ಮೂರನೇ ಅವಧಿಗೆ ಆಯ್ಕೆಯನ್ನ ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.
ಚೀನಾದ ಕಾನ್ಸುಲೇಟ್‌ನ ಹೊರಗೆ ಕ್ಸಿ ಜಿನ್‌ಪಿಂಗ್ ವಿರುದ್ಧ ಕೆಲವರು ಘೋಷಣೆಗಳನ್ನು ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾನ್ಸುಲೇಟ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಇದರ ನಂತರ, ಕೆಲವು ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ಕಾನ್ಸುಲೇಟ್‌ನ ಗೇಟ್‌ನೊಳಗೆ ಎಳೆದುಕೊಂಡು ನಂತರ ಹಲ್ಲೆ ಮಾಡಿದ್ದಾರೆ. ಇದಾದ ನಂತರ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರನನ್ನು ರಕ್ಷಿಸಿ ಅಲ್ಲಿಂದ ಹೊರ ಕರೆದೊಯ್ದರು.
ಈ ಘಟನೆ ಅಕ್ಟೋಬರ್ 16 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಚೀನಾದ ಬೀಜಿಂಗ್‌ನಲ್ಲಿ ಈ ದಿನ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಸಿಪಿ) ಸಭೆ ಪ್ರಾರಂಭವಾಯಿತು. ಇದರಲ್ಲಿ ಕ್ಸಿ ಜಿನ್‌ಪಿಂಗ್ ಮೂರನೇ ಅವಧಿಗೆ ಅಧ್ಯಕ್ಷರಾಗುತ್ತಾರೆ ಎಂದು ನಂಬಲಾಗಿದೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮೂರನೇ ಅವಧಿಗೆ ಅಧಿಕಾರ ಸ್ವೀಕರಿಸುತ್ತಾರೆ ಎಂದು ವರದಿಗಳು ತಿಳಿಸುತ್ತಿವೆ. ಸಾಮಾನ್ಯವಾಗಿ, ಚೀನಾದಲ್ಲಿ ಯಾವುದೇ ಅಧ್ಯಕ್ಷರು ಕೇವಲ ಎರಡು ಅವಧಿಗೆ ಮಾತ್ರ ಸೇವೆ ಸಲ್ಲಿಸುತ್ತಾರೆ, ಆದರೆ ಸಂವಿಧಾನವನ್ನು ತಿದ್ದುಪಡಿ ಮಾಡಿದ ನಂತರ, ಈ ಷರತ್ತು ಜಿನ್‌ಪಿಂಗ್‌ಗೆ ಅನ್ವಯಿಸುವುದಿಲ್ಲ. ಯಾವುದೇ ಪವಾಡ ನಡೆಯದಿದ್ದರೆ ಜಿನ್ ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾಗುವುದು ನಿಶ್ಚಿತವಾಗಿದೆ.
China consulate: Protest in front of Britain’s Chinese embassy – dragged inside the premises and beaten…