China Covid : ಚೀನಾದಲ್ಲಿ ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಸಾಮೂಹಿಕ ಶವ ಸಂಸ್ಕಾರ…
ಮುಂದಿನ ದಿನಗಳಲ್ಲಿ 800 ಮಿಲಿಯನ್ ಚೀನಾದ ಜನರು ಕರೋನಾ ಸೋಂಕಿಗೆ ಒಳಗಾಗಲಿದ್ದಾರೆ ಎಂದು ಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಕಂಪನಿ ಏರ್ಫಿನಿಟಿ ತಿಳಿಸಿದೆ.
ಚೀನಾದಲ್ಲಿ ಶೂನ್ಯ ಕೋವಿಡ್ ( ಜೀರೋ ಟಾಲರೆನ್ಸ್ ) ನೀತಿಯನ್ನ ಅಂತ್ಯಗೊಳಿಸಿದ ನಂತರ 2.1 ಮಿಲಿಯನ್ ಸಾವುಗಳು ಸಂಭವಿಸಬಹುದು. ಚೀನಾದಲ್ಲಿ ಕಡಿಮೆ ವ್ಯಾಕ್ಸಿನೇಷನ್ ಮತ್ತು ಪ್ರತಿಕಾಯಗಳ ಕೊರತೆಯಿಂದಾಗಿ ಮತ್ತೊಮ್ಮೆ ಕರೋನಾ ಹರಡಿದೆ ಎಂದು ಏರ್ ಫಿನಿಟಿ ತಿಳಿಸಿದೆ.
ಚೀನಾದಲ್ಲಿ ಸಧ್ಯದ ಪರಿಸ್ಥಿತಿಯು 2020 ನ್ನ ನೆನಪಿಸುತ್ತಿದೆ. ಆಸ್ಪತ್ರೆಗಳಲ್ಲಿ ಎಲ್ಲಾ ಹಾಸಿಗೆಗಳು ತುಂಬಿದ್ದು, ಮೆಡಿಕಲ್ ಸ್ಟೋರ್ಗಳಲ್ಲಿ ಔಷಧಗಳು ಖಾಲಿಯಾಗುತ್ತಿವೆ. ರೋಗಿಗಳು ಚಿಕಿತ್ಸೆಗಾಗಿ ವೈದ್ಯರ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ.
ಬೀಜಿಂಗ್ನ ಅತಿ ದೊಡ್ಡ ಸ್ಮಶಾನದಲ್ಲಿ ದಿನದ 24 ಗಂಟೆಯೂ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸಾಮೂಹಿಕ ಅಂತ್ಯಕ್ರಿಯೆಗಳು ಪ್ರಾರಂಭವಾಗಿರುವ ಚಿತ್ರಗಳು ಹೊರಬರುತ್ತಿವೆ. ಹೊಸ ರೂಪಾಂತರ BA.5.2.1.7 ಅಂದರೆ BF.7 ನ್ನ ಪತ್ತೆ ಹಚ್ಚಲಾಗಿದ್ದು, ತಜ್ಞರ ಪ್ರಕಾರ, ಇದು ಓಮಿಕ್ರಾನ್ನ ಅತ್ಯಂತ ಅಪಾಯಕಾರಿ ರೂಪಾಂತರವಾಗಿದೆ.
China Covid : China Coronavirus Outbreak Situation