ಕೊರೋನಾ ಬಿಕ್ಕಟ್ಟಿನ ನಡುವೆ ಪಾಕಿಸ್ತಾನಕ್ಕೆ ಚೀನಾದಿಂದ ದೊಡ್ಡ ಹೊಡೆತ
ಇಸ್ಲಾಮಾಬಾದ್, ಜನವರಿ16: ಪಾಕಿಸ್ತಾನವನ್ನು ದೀರ್ಘಕಾಲದ ಚೀನಾದ ಆಪ್ತ ಸ್ನೇಹಿತ ಎಂದು ಪರಿಗಣಿಸಲಾಗಿದೆ. ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದಾಗಲೆಲ್ಲಾ ಅದಕ್ಕೆ ನೆರವಾಗುವ ದೇಶ ಚೀನಾ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಆದರೆ ಈ ಬಾರಿ ಕೊರೋನಾ ಬಿಕ್ಕಟ್ಟಿನಲ್ಲಿ ಚೀನಾ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಹತ್ತು ಪಾಕಿಸ್ತಾನಿ ಪ್ರಯಾಣಿಕರು ಕೊರೋನಾ ಪಾಸಿಟಿವ್ ಎಂದು ತಿಳಿದುಬಂದ ನಂತರ ಚೀನಾ ಪಾಕಿಸ್ತಾನದ ಪ್ರಯಾಣಿಕರಿಗೆ ತಾತ್ಕಾಲಿಕ ಪ್ರಯಾಣ ನಿಷೇಧವನ್ನು ವಿಧಿಸಿದೆ. ಇದರಿಂದಾಗಿ ಪಾಕಿಸ್ತಾನದ ಪ್ರಯಾಣಿಕರಿಗೆ ಸ್ವಲ್ಪ ಸಮಯದವರೆಗೆ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಕ್ಸಿಯಾವೋ ನ್ಯೂಸ್ ಪ್ರಕಾರ, ಚೀನಾವು ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ ಲೈನ್ಸ್ ನಿಂದ ಮೂರು ವಾರಗಳವರೆಗೆ ವಿಮಾನಗಳ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಚೀನಾದ ವಿಮಾನಯಾನ ಸಂಸ್ಥೆ ಸ್ವಲ್ಪ ಸಮಯದವರೆಗೆ ಪಾಕಿಸ್ತಾನ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ಖಚಿತಪಡಿಸಿದ್ದಾರೆ.
ಕೋವಿಡ್-19 ಲಸಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಗಳು
ಇತ್ತೀಚೆಗೆ ಪಾಕಿಸ್ತಾನದಿಂದ ಕೆಲವು ಪ್ರಯಾಣಿಕರು ಚೀನಾಕ್ಕೆ ಭೇಟಿ ನೀಡಿದ್ದರು. ಅವರೆಲ್ಲರೂ ಕೊರೋನಾ ವೈರಸ್ ನೆಗೆಟಿವ್ ಹೊಂದಿರುವ ವರದಿಗಳನ್ನು ಹೊಂದಿದ್ದರು. ಆದರೆ ಚೀನಾವನ್ನು ತಲುಪಿದ ನಂತರ ನಡೆದ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಕಂಡುಬಂತು.
ಚೀನಾದಲ್ಲಿ ಗುರುವಾರ ಕೊರೋನಾ ಸೋಂಕಿನ 144 ಹೊಸ ಪ್ರಕರಣಗಳು ವರದಿಯಾಗಿವೆ. ಈ ಸಂಖ್ಯೆ ಕಳೆದ 10 ತಿಂಗಳಲ್ಲಿ ಅತಿ ಹೆಚ್ಚು. ಉತ್ತರ ಚೀನಾದ ಹೆಬೀ ಪ್ರಾಂತ್ಯದಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ. ಗುರುವಾರ ಇಲ್ಲಿ 90 ಜನರಿಗೆ ಕೋವಿಡ್-19 ಸೋಂಕು ಧೃಡ ಪಟ್ಟಿದೆ. ಇದಲ್ಲದೆ, ಇನ್ನೂ ಒಂಬತ್ತು ರೋಗಲಕ್ಷಣದ ಪ್ರಕರಣಗಳು ಕಂಡುಬಂದಿವೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಅದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ಶುಕ್ರವಾರ 2417 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, 45 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಕೊರೋನಾ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿದೆ. ಈವರೆಗೆ 514338 ಪ್ರಕರಣಗಳು ವರದಿಯಾಗಿವೆ ಮತ್ತು ಒಟ್ಟು 10,863 ಜನರು ಸಾವನ್ನಪ್ಪಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9
— Saaksha TV (@SaakshaTv) January 12, 2021
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021








