ಪಾಕಿಸ್ತಾನಕ್ಕೆ ಚೀನಾದಿಂದ ನೌಕಾ ಕ್ಷಿಪಣಿ ಹಡಗಿನ ಮಾರಾಟ
ಇಸ್ಲಾಮಾಬಾದ್, ಫೆಬ್ರವರಿ07: ಪಾಕಿಸ್ತಾನ ಮತ್ತು ಚೀನಾ ಬಹಳ ಆತ್ಮೀಯ ಸ್ನೇಹಿತರು ಎಂದು ಎಲ್ಲರಿಗೂ ತಿಳಿದಿದೆ. ಭಾರತದೊಂದಿಗಿನ ಚೀನಾದ ಸಂಬಂಧವು ಮೊದಲಿನಂತೆ ಸ್ನೇಹಪರವಾಗಿಲ್ಲ. ಇಂಡೋ-ಪಾಕ್ ವಿಭಜನೆಯ ನಂತರ, ಭಾರತದ ಮೇಲಿರುವ ಪಾಕಿಸ್ತಾನದ ದ್ವೇಷವು ಚೀನಾವನ್ನು ಪಾಕಿಸ್ತಾನಕ್ಕೆ ಬಹಳ ಹತ್ತಿರವಾಗಿಸಿದೆ.

ಚೀನಾದ ಸ್ನೇಹದಿಂದಾಗಿ, ಪಾಕಿಸ್ತಾನಕ್ಕೆ ಭಾರತಕ್ಕೆ ತೊಂದರೆ ಮಾಡಲು ಸಹಾಯ ಸಿಕ್ಕಿದಂತಾಗಿದೆ. ಇದೀಗ ಭಾರತಕ್ಕೆ ಹಾನಿ ಮಾಡಲು ಚೀನಾ ಮತ್ತೆ ಹೊಸ ಹೆಜ್ಜೆ ಇಟ್ಟಿದೆ. ಪಾಕಿಸ್ತಾನಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಲು ಚೀನಾ ನೋಡುತ್ತಿದೆ.
ಲಷ್ಕರ್-ಎ-ಮುಸ್ತಫಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಬಂಧನ
ಪಾಕಿಸ್ತಾನದ ನೌಕಾ ಮುಖ್ಯಸ್ಥ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಜನವರಿ 29 ರಂದು ನಡೆದ ಸಭೆಯ ನಂತರ, ಎರಡನೇ ಟೈಪ್ 054 ಎ / ಪಿ ವಿವಿಧೋದ್ದೇಶ ನೌಕಾ ಕ್ಷಿಪಣಿ ಹಡಗನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಚೀನಾ ನಿರ್ಧರಿಸಿದೆ.

ಪಾಕ್ ಕೂಡ ಅದನ್ನು ಖರೀದಿಸಲು ಒಪ್ಪಿಕೊಂಡಿದೆ. ಈ ಹಡಗಿನಲ್ಲಿ ಆಧುನಿಕ ರಾಡಾರ್ ವ್ಯವಸ್ಥೆಗಳು ಮತ್ತು ದೀರ್ಘ-ಶ್ರೇಣಿಯ ಫೈರ್‌ಪವರ್ ಕ್ಷಿಪಣಿಗಳಿವೆ. ಮಿಲಿಟರಿ ಆಧುನೀಕರಣ ಪ್ರಕ್ರಿಯೆಯ ಭಾಗವಾಗಿ, ಪಾಕಿಸ್ತಾನ ನೌಕಾಪಡೆ ತನ್ನ ಹಳೆಯ ಹಡಗುಗಳು ಮತ್ತು ಉಪಕರಣಗಳನ್ನು ಬದಲಿಸುತ್ತಿದೆ ಮತ್ತು ಸ್ನೇಹಿತ ದೇಶ ಚೀನಾದಿಂದ ಹೊಸದನ್ನು ಖರೀದಿಸುತ್ತಿದೆ ಎಂದು ಪಾಕಿಸ್ತಾನದ ಅಡ್ಮಿರಲ್ ಎಂ. ಅಮ್ಜಾದ್ ಖಾನ್ ನಿಯಾಝಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1356996556046491650?s=19
https://twitter.com/SaakshaTv/status/1357179617728167936?s=19








