ನೇಪಾಳ ಪ್ರದೇಶವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವ ಚೀನಾ
ಹಮ್ಲಾ, ಸೆಪ್ಟೆಂಬರ್21: ಹಮ್ಲಾದ ಲ್ಯಾಪ್ಚಾ-ಲಿಮಿ ಪ್ರದೇಶದಲ್ಲಿ ಒಂಬತ್ತು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸುವ ಮೂಲಕ ಚೀನಾ ನೇಪಾಳ ಪ್ರದೇಶವನ್ನು ಅತಿಕ್ರಮಿಸಿದೆ.
ಆಗಸ್ಟ್ 30 ರಿಂದ ಸೆಪ್ಟೆಂಬರ್ 9 ರವರೆಗೆ ಹಮ್ಲಾದ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ದಲ್ಬಹಾದೂರ್ ಹಮಾಲ್ ಅವರು ಇತ್ತೀಚೆಗೆ ನಡೆಸಿದ ತನಿಖೆಯಿಂದ ನೇಪಾಳದ ಭೂಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಖಬರ್ಹುಬ್ ವರದಿ ಮಾಡಿದೆ.
ಚೀನಾ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡಗಳ ಮಾಹಿತಿಯನ್ನು ಸ್ಥಳೀಯರು ವರದಿ ಮಾಡಿದ ನಂತರ ಸಹಾಯಕ ಸಿಡಿಒ ಸ್ಥಳಕ್ಕೆ ಭೇಟಿ ನೀಡಿದ್ದರು.
ಅನಾಮಧೇಯತೆಯನ್ನು ಕಾಪಾಡಿಕೊಳ್ಳುವ ಮಾನಿಟರಿಂಗ್ ತಂಡದ ಸದಸ್ಯರನ್ನು ಉಲ್ಲೇಖಿಸಿ ಖಬರ್ಹುಬ್, ನಾವು ಕಟ್ಟಡಗಳನ್ನು ದೂರದಿಂದ ನೋಡಬಹುದು. ಅಲ್ಲಿ ಚೀನಾ ನಿರ್ಮಿಸುತ್ತಿರುವ ಕಟ್ಟಡದ ಬಗ್ಗೆ ವದಂತಿಗಳನ್ನು ನಾವು ಕೇಳಿದ್ದೇವು. ಆದರೆ ನಮ್ಮ ಭೇಟಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಕಂಡುಕೊಂಡಿದ್ದೇವೆ ಎಂದು ಹೇಳಿದೆ. ಈ ವಿಷಯವನ್ನು ನೇಪಾಳ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಮಾಡಲಾಗಿದೆ.








