ನೇಪಾಳದಲ್ಲಿ ತನ್ನ ಗೂಡಚಾರರನ್ನು ನಿಯೋಜಿಸಿದ ಚೀನಾ
ಕಠ್ಮಂಡ್, ಜುಲೈ 3: ನೇಪಾಳದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಹಿಮಾಲಯನ್ ದೇಶದಲ್ಲಿ ಭಾರತದ ಪ್ರಭಾವವನ್ನು ಕೊನೆಗೊಳಿಸಲು ಚೀನಾ ಮತ್ತು ಪಾಕಿಸ್ತಾನಗಳು ದೊಡ್ಡ ಪಿತೂರಿಯಲ್ಲಿ ತೊಡಗಿವೆ. ಭಾರತೀಯ ಭದ್ರತಾ ಸಂಸ್ಥೆಗಳ ಪ್ರಕಾರ, ಚೀನಾ ನೇಪಾಳದಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದು, ನೇಪಾಳದಲ್ಲಿ ಕೋವಿಡ್-19 ವೈದ್ಯಕೀಯ ಸಹಾಯಕ್ಕಾಗಿ ಚೀನಾದ ಗೂಢಚಾರರನ್ನು ವೈದ್ಯಕೀಯ ಸಿಬ್ಬಂದಿಯ ಹೆಸರಿನಲ್ಲಿ
ನಿಯೋಜಿಸಿದೆ.
ಗುಪ್ತಚರ ವರದಿಯ ಪ್ರಕಾರ, ಚೀನಾದ ಗುಪ್ತಚರ ಸಂಸ್ಥೆ ಮಿಲಿಟರಿ ಆಫ್ ಸ್ಟೇಟ್ ಸೆಕ್ಯುರಿಟಿ (ಎಂಎಸ್ಎಸ್) ನೇಪಾಳದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿದ್ದು, ನೇಪಾಳದ ಪ್ರತಿ ಬೆಳವಣಿಗೆ ಮೇಲೂ ಕಣ್ಣಿಟ್ಟಿದೆ.
ಎಂಎಸ್ಎಸ್ ವಿದೇಶಿ ಗುಪ್ತಚರ ಜವಾಬ್ದಾರಿಯುತ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಗುಪ್ತಚರ ಮತ್ತು ರಹಸ್ಯ ಪೊಲೀಸ್ ಏಜೆನ್ಸಿಯಾಗಿದೆ.
ಓಲಿ ಕೆಳಗಿಳಿದು ಬೇರೆಯವರು ಅಧಿಕಾರದ ಗದ್ದುಗೆಗೆ ಏರಿದರೆ ಸಹಜವಾಗಿ ಭಾರತ ವಿರೋಧಿ ಧೋರಣೆಯನ್ನು ಹೊಂದಿರುವುದಿಲ್ಲ ಎಂಬುವುದು ಚೀನಾದ ನಿದ್ದೆಗೆಡಿಸಿರುವ ಅಂಶವಾಗಿದ್ದು, ಪಾಕಿಸ್ತಾನದ ಹಲವು ಸಂಸ್ಥೆಗಳು ಕೂಡ ನೇಪಾಳದಲ್ಲಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿವೆ. ವಿಶ್ಲೇಷಕರ ಪ್ರಕಾರ, ನೇಪಾಳ ಮತ್ತು ಭಾರತದ ನಡುವಿನ ಗಡಿ ವಿವಾದದ ಲಾಭವನ್ನು ಪಾಕಿಸ್ತಾನ ಕೂಡ ಪಡೆದುಕೊಳ್ಳುತ್ತಿದೆ.
ಪಾಕಿಸ್ತಾನದ ಏಜೆನ್ಸಿಗಳು ಪ್ರಧಾನಿ ಒಲಿ ಮತ್ತು ನೇಪಾಳದ ಇತರ ಪ್ರಮುಖ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ ಮತ್ತು ಅವರನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಲಿಗೆ ಬೆಂಬಲ ನೀಡಿದ್ದು, ಒಲಿಯೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ.