ಚೀನಾ, ಭಾರತದ ಗಡಿ ಪಡೆಗಳು ಉದ್ವಿಗ್ನತೆ: ರಾಜತಾಂತ್ರಿಕ ಮತ್ತು ಮಿಲಿಟರಿ ಮೂಲಕ ಮಾತುಕತೆ

ಹೊಸದಿಲ್ಲಿ, ಜೂನ್ 14: ಚೀನಾ ಮತ್ತು ಭಾರತೀಯ ಗಡಿ ಪಡೆಗಳು ಉನ್ನತ ಮಟ್ಟದ ವಿವಿಧ ಮಜಲುಗಳಲ್ಲಿ ಒಮ್ಮತದ ಅನುಷ್ಠಾನವನ್ನು ಉತ್ತೇಜಿಸಲು ಮತ್ತು ಎರಡು ದೇಶಗಳ ನಡುವೆ ತಲೆದೂರಿರುವ ಭಿನ್ನತೆಗಳನ್ನು ನಿಯಂತ್ರಣಕ್ಕೆ ತರಲು ಮುಂಚೂಣಿಯಲ್ಲಿ ಮಾತುಕತೆಯ ಮೂಲಕಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಕೆಲವು ಮೂಲಗಳ ಪ್ರಕಾರ ತಿಳಿದುಬಂದಿದೆ.
ಇತ್ತೀಚಿನ ಗಡಿ ಉದ್ವಿಗ್ನತೆಗೆ ಪರಿಹಾರವನ್ನು ಕಂಡುಹಿಡಿಯಲು ಉಭಯ ಕಡೆಯವರು ಇತ್ತೀಚೆಗೆ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದರು. ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ನಡೆದ ಮಾತುಕತೆಗಳು ನಿಕಟ ಮತ್ತು ಸುಗಮವಾಗಿತ್ತು ಎಂದು ಮೂಲಗಳು ತಿಳಿಸಿವೆ. ಚೀನಾ-ಭಾರತ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಾಗಿ ಸ್ಥಿರ ವಾಗಿದ್ದು ಮತ್ತು ನಿಯಂತ್ರಿಸಬಲ್ಲದುದಾಗಿದೆ.
ಚೀನಾ ಮತ್ತು ಭಾರತ ಎರಡೂ ವಿಶ್ವದ ಎರಡು ಅತಿದೊಡ್ಡ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿದ್ದು ಕರೋನವೈರಸ್ ಅನ್ನುವ ಮಹಾಮಾರಿಯನ್ನು ಎದುರಿಸಲು ಮತ್ತು ಜನರ ಜೀವನ ಮತ್ತು ಆರೋಗ್ಯವನ್ನು ರಕ್ಷಿಸುವ ಆದ್ಯತೆಗಳ ಜೊತೆಗ ದೇಶೀಯ ಬೆಳವಣಿಗೆಗಳನ್ನು ಮುಂದಕ್ಕೆ ತರುವ ಕೆಲಸವೂ ಆಗಬೇಕಿದೆ

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚೀನಾ ಮತ್ತು ಭಾರತವು ತಾವು ತಲುಪಿದ ಒಮ್ಮತಕ್ಕೆ ಅನುಗುಣವಾಗಿ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿವೆ. ಇತ್ತೀಚಿನ ಗಡಿ ಉದ್ವಿಗ್ನತೆ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಕುರಿತು ಚೀನಾ ಮತ್ತು ಭಾರತದ ಮಿಲಿಟರಿಗಳು ಶನಿವಾರ ಸೇನಾ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಕಟ ಸಂಪರ್ಕವನ್ನು ಕಾಯ್ದುಕೊಂಡಿವೆ ಮತ್ತು ವಿವಾದವು ಸಂಘರ್ಷಕ್ಕೆ ಉಲ್ಬಣಗೊಳ್ಳಬಾರದು ಎಂಬ ಒಮ್ಮತವನ್ನು ತಲುಪಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಬೇಕು ಮತ್ತು ಆರೋಗ್ಯಕರ ದ್ವಿಪಕ್ಷೀಯ ಸಂಬಂಧಗಳ ಸ್ಥಿರ ಅಭಿವೃದ್ಧಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕು ಎಂದು ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಮತ್ತು ಚೀನಾದ ಪಡೆಗಳು ಕ್ರಮೇಣ “ಸ್ಟ್ಯಾಂಡ್ಆಫ್ ಸ್ಥಾನಗಳಿಂದ” ಹಿಂದೆ ಸರಿಯಲು ಪ್ರಾರಂಭಿಸಿವೆ . ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರು ಹಳೆಯ ಚಾಲಿಯಂತೆ ಭಾರತದ ಗಡಿಪ್ರದೇಶಕ್ಕೆ ನುಗ್ಗಿ ದಾಂದಲೆ ಮಾಡಲು ಯತ್ನಿಸಿದಾಗ ಪ್ರತಿಭಟಿಸಿದ ಭಾರತದ ಸೇನೆಯ ನಿರ್ಧಾರ ಚೀನಾ-ಭಾರತ ಗಡಿ ಉದ್ವಿಗ್ನತೆ ಕಾರಣವಾಗಿತ್ತು.
ಸೇನಾ ಜನರಲ್ ಎಂಎಂ ನರವಣೆ ಅವರು ಮಾತನಾಡಿ ಎರಡೂ ಕಡೆಯ ಮಿಲಿಟರಿಗಳ ಮಾತುಕತೆ ಮುಂದುವರಿದಿದ್ದು, ಸದ್ಯಕ್ಕೆ ಎಲ್ಲವೂ ನಿಯಂತ್ರಣದಲ್ಲಿವೆ. ಶೀಘ್ರದಲ್ಲೇ ನಮ್ಮೊಳಗಿನ ಕಲ್ಪಿತ ಭಿನ್ನಾಭಿಪ್ರಾಯಗಳು ಶಮನವಾಗಿ ಸಮಸ್ಯೆ ಬಗೆಹರಿಯಲಿದೆ ಎಂಬ ಆಶಯ ಹೊಂದಿರುವುದಾಗಿ ತಿಳಿಸಿದರು.








