China : ಚೀನಾದಲ್ಲಿ ಮತ್ತೆ ಕೋವಿಡ್ 19 ಸಮ್ಯೆ ಉಲ್ಭಣ – ಮೊದಲ ಬಾರಿಗೆ ಕ್ಷಿ ಜಿಂಗ್ ಪಿಂಗ್ ಮಾತು..!!
ಇಡೀ ವಿಶ್ವಕ್ಕೆ ಕೊರೊನಾ ಎಂಬ ಮಹಾಮಾರಿಯನ್ನ ಹಬ್ಬಿಸಿದ್ದ ಚೀನಾ ಕೋಟ್ಯಾಂತರ ಜನರ ಸಾವಿಗೆ ಕಾರಣವಾಗಿತ್ತು.. ಇಂದಿಗೂ ಕುತಂತ್ರಿ ಚೀನಾವನ್ನ ಇಡೀ ವಿಶ್ವವೇ ಶಪಿಸುತ್ತಿದೆ..
ಇನ್ನೇನು ಕೊರೊನಾ ಹಾವಳಿ ಕಡಿಮೆಯಾಗಿಯೇ ಬಿಡ್ತು ಎನ್ನುವ ಹೊತ್ತಲ್ಲೇ ಇದೀಗ ಕೊರೊನಾ ತಾಯ್ನಾಡು ಚೀನಾದಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದೆ..
ಎಷ್ಟರ ಮಟ್ಟಿಗೆಂದ್ರೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ..
ಅಂದ್ಹಾಗೆ ಈನಾದ ಅಧ್ಯಕ್ಷ ಕ್ಷಿ ಜಿಂಗ್ ಪಿಂಗ್ ಇದೇ ಮೊದಲ ಬಾರಿಗೆ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ನಾವು ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗವನ್ನು ಬಲಪಡಿಸಬೇಕು. ಜನರ ಜೀವವನ್ನು ಉಳಿಸಲು ಬೇಕಾದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕ್ಷಿ ಜಿನ್ಪಿಂಗ್ ಸಲಹೆ ನೀಡಿರೋದಾಗಿ ಹೇಳಿಕೊಂಡಿದ್ದಾರೆ..
ಕೋವಿಡ್ ನಿಯಂತ್ರಣಕ್ಕೆ ಚೀನಾ ಹೊಸ ಸವಾಲನ್ನು ಎದುರಿಸುತ್ತಿದೆ. ದೇಶೀಯವಾಗಿ ಆರೋಗ್ಯ ಅಭಿಯಾನ ಆರಂಭಿಸಬೇಕು. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಚೀನಾದಲ್ಲಿ ವರದಿಯಾಗುತ್ತಿವೆ.