ಚೀನಾದ ಪರಮ ಮಿತ್ರ ಉತ್ತರ ಕೊರಿಯಾಕ್ಕೆ ಮಿಲಿಯನ್ ಡಾಲರ್ ವೈದ್ಯಕೀಯ ನೆರವು
ಹೊಸದಿಲ್ಲಿ, ಜುಲೈ 26: ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆಯೂ, ಭಾರತವು ಇತರ ದೇಶಗಳಿಗೆ ಸಹಾಯ ಮಾಡಲು ಹಿಂದೆ ಸರಿಯುತ್ತಿಲ್ಲ. ಇದೀಗ ವಿಶ್ವ ಅರೋಗ್ಯ ಸಂಸ್ಥೆಯ ಕೋರಿಕೆಯ ಮೇರೆಗೆ ಭಾರತ ಸುಮಾರು ಒಂದು ಮಿಲಿಯನ್ ಡಾಲರ್ ನಷ್ಟು ಮೊತ್ತದ ವೈದ್ಯಕೀಯ ನೆರವನ್ನು ಉತ್ತರ ಕೊರಿಯಾಕ್ಕೆ ಕಳುಹಿಸಿದೆ. ಈ ವಿಚಾರವನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದ್ದು ಭಾರತ ಯಾವತ್ತೂ ಯಾರನ್ನು ದೂರಮಾಡುವುದಿಲ್ಲ. ಅವರು ನಮ್ಮ ಶತ್ರುದೇಶವೇ ಆಗಿರಲಿ ಅಥವಾ ಮಿತ್ರನೇ ಆಗಿರಲಿ ಎಂದು ಹೇಳಿದೆ. ಉತ್ತರ ಕೊರಿಯಾ ಚೀನಾದ ವಿಶೇಷ ಸ್ನೇಹಿತ ಎಂದು ತಿಳಿದಿದ್ದರೂ ಸಹ, ತನ್ನ ಸಹಾಯ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವಾಲಯ ಉತ್ತರ ಕೊರಿಯಾ ಚೀನಾದಲ್ಲಿ ಇಲ್ಲ ಎಂದು ತಿಳಿಸಿದೆ. ಉತ್ತರ ಕೊರಿಯಾದಲ್ಲಿ ವೈದ್ಯಕೀಯ ಉಪಕರಣಗಳ ಕೊರತೆ ಇದ್ದು, ಮಾನವೀಯತೆಯ ಆಧಾರದ ಮೇಲೆ ಸುಮಾರು 1 ಮಿಲಿಯನ್ ಡಾಲರ್ನ್ ನಷ್ಟು ವೈದ್ಯಕೀಯ ಸಹಾಯವನ್ನು ನೀಡಲಾಗಿದೆ ಎಂದು ಹೇಳಿದೆ.
ವಿಶ್ವ ಅರೋಗ್ಯ ಸಂಸ್ಥೆ ಉತ್ತರ ಕೊರಿಯಾದಲ್ಲಿ ನಡೆಸುತ್ತಿರುವ ಕ್ಷಯ ರೋಗ ನಿರ್ಮೂಲನದ ಅಂಗವಾಗಿ ಭಾರತದ ರಾಯಭಾರಿ ಅತುಲ್ ಮೇಲ್ಹರಿ ಅವರು , ಉತ್ತರ ಕೊರಿಯಾದ ಅಧಿಕಾರಿಗಳಿಗೆ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದರು. ಕಳೆದ ಮೂರು ತಿಂಗಳಲ್ಲಿ ದೇಶದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದ್ದು, ಇದು ನಂಬಲು ಸಾಧ್ಯವಿಲ್ಲವಾಗಿದೆ