ಅಮೆರಿಕ ಚೀನಾದ ಡೀಪ್ಸೀಕ್ ಎಂಬ AI ಅಪ್ಲಿಕೇಶನ್ ಭದ್ರತೆಯ ಮೇಲೆ ಬೀರುವ ಪರಿಣಾಮಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ತಿಳಿಸಿದ್ದಾರೆ. ಡೀಪ್ಸೀಕ್ ಡೆವಲಪ್ಮೆಂಟ್ ನಲ್ಲಿ ಐಟಿ ಕಳ್ಳತನ ಅಥವಾ ತಾಂತ್ರಿಕ ಮಾಹಿತಿ ದುರಪಯೋಗ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಟ್ರಂಪ್ ತಂಡದ ಟೀಕೆ:
ಟ್ರಂಪ್ ಅವರ AI ಮತ್ತು ಕ್ರಿಸ್ಟೋ ಸಲಹೆಗಾರ ಡೇವಿಡ್, ಡೀಪ್ಸೀಕ್ ಯಶಸ್ಸು ‘ಡಿಸ್ಟಿಲೇಷನ್’ ತಂತ್ರವನ್ನು ಬಳಕೆ ಮಾಡುವ ಮೂಲಕ ಸಾಧ್ಯವಾಯಿತೆಂದು ಅಭಿಪ್ರಾಯ ಪಟ್ಟಿದ್ದಾರೆ. ಡಿಸ್ಟಿಲೇಷನ್ ತಂತ್ರದಲ್ಲಿ, ಒಂದು AI ಮಾದರಿ ಇನ್ನೊಂದು ಮಾದರಿಯು ಕಲಿಯಲು ಸಹಾಯ ಮಾಡುತ್ತದೆ, ಇದನ್ನು ಡೀಪ್ಸೀಕ್ ಕಾರ್ಯಕ್ಷಮತೆಯಲ್ಲಿ ಬಳಸಲಾಗಿದೆ ಎಂದು ಅವರು ಶಂಕಿಸಿದ್ದಾರೆ.
ಅಮೆರಿಕದ ಭದ್ರತೆಗಾಗಿ ತೀವ್ರ ಪರಿಶೀಲನೆ:
ಡೀಪ್ಸೀಕ್ ಅಪ್ಲಿಕೇಶನ್ ಭದ್ರತೆಯನ್ನು ಉಲ್ಲಂಘಿಸುವ ಸಾಧ್ಯತೆಗಳ ಬಗ್ಗೆ ಅಮೆರಿಕ ತಮ್ಮ ಭದ್ರತಾ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಚೀನಾದ AI ಡೆವಲಪ್ ಪಾಠ ಮತ್ತು ಮಾರ್ಗಗಳನ್ನು ವೀಕ್ಷಿಸುತ್ತಿದೆ.