ಚೀನಾ ಗಡಿ ಬಳಿ ನಾಪತ್ತೆಯಾಗಿದ್ದ ಬಾಲಕ, ಭಾರತಕ್ಕೆ ಹಸ್ತಾಂತರ.
ಚೀನಾದ ಪಿಎಲ್‌ಎ ಆರ್ಮಿ ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. “ಅವರ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ” ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ, ಜನವರಿ 28 ರಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಸಿಯುಂಗ್ಲಾ ವ್ಯಾಪ್ತಿಯ ಲುಂಗ್ಟಾ ಜೋರ್ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಎಂಬ ಯುವಕ ಜನವರಿ 18 ರಂದು ನಾಪತ್ತೆಯಾಗಿದ್ದನು. China’s PLA hands over ‘abducted’ Arunachal boy to Indian Army after 9 days
ಜನವರಿ 23 ರಂದು ಭಾರತೀಯ ಸೇನೆಯು “ಕಾಣೆಯಾದ ಯುವಕ ಟ್ಯಾರಾನ್” ಅನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪತ್ತೆ ಮಾಡಿದೆ ಎಂದು ಹೇಳಿತ್ತು. “ಅರುಣಾಚಲ ಪ್ರದೇಶದ ನಾಪತ್ತೆಯಾದ ಬಾಲಕನನ್ನು ಪತ್ತೆಹಚ್ಚಲಾಗಿದೆ ಎಂದು ಚೀನಾದ ಸೇನೆಯು ನಮಗೆ ತಿಳಿಸಿದ್ದು, ಸೂಕ್ತ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ” ಎಂದು PRO ಡಿಫೆನ್ಸ್, ತೇಜ್ಪುರ್ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಹೇಳಿಕೆಯಲ್ಲಿ ತಿಳಿಸಿದ್ದರು.
ಅರುಣಾಚಲ ಪ್ರದೇಶದ ಯುವ ಭಾರತೀಯ ಮಿರಾಮ್ ಟ್ಯಾರೋನ್ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಚೀನಾದ ಪಿಎಲ್‌ಎ ಖಚಿತಪಡಿಸಿದೆ ಎಂದು ಕಿರಣ್ ರಿಜಿಜು ಬುಧವಾರ ಹೇಳಿದ್ದರು. ಹೇಳಿಕೆಯ ಒಂದು ದಿನದ ನಂತರ ಬಾಲಕನ್ನ ಭಾರತಕ್ಕೆ ಹಸ್ತಾಂತರಿಸಲಾಗಿದೆ.








