ಟಿಕ್ ಟಾಕ್..! 6 ವರ್ಷದ ಚಿಕ್ಕವರಿಂದ ಹಿಡಿದು 60 ವರ್ಷದ ವೃದ್ಧರ ವರೆಗೆ ಹುಚ್ಚು ಹಿಡಿಸಿದ್ದ ಆಪ್. ಅದರಲ್ಲೂ ಕಾಲೇಜಿನ ಪಡ್ಡೆಗಳಂತೂ ಯಾವಾಗಲೂ ಟಿಕ್ ಟಾಕ್ ನಲ್ಲೇ ಮುಳುಗಿರುತ್ತಿದ್ದರು..
ಈ ಟಿಕ್ ಟಾಕ್ ಆಪ್ ನಲ್ಲಿ ಫೇಮಸ್ ಆಗುವ ಗೀಳಿನಲ್ಲಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೆಷ್ಟೂ ಮಂದಿ ಇದರಿಂದ ಫೇಮಸ್ ಆಗಿದ್ದಾರೆ. ಇದೇಲ್ಲ ಏನೇ ಇರಲಿ..
ಭದ್ರತಾ ದೃಷ್ಠಿಯಿಂದ ಚೀನಾದ ಈ ಆಪ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಇದು ಕನ್ನಡಿಗರೇ ಅಭಿವೃದ್ಧಿ ಪಡಿಸಿರುವ ಚಿಂಗಾರಿ ಆಪ್ ಗೆ ವರದಾನವಾಗಿದೆ.
ಟಿಕ್ ಟಾಕ್ ಗೆ ಸೆಡ್ಡು ಹೊಡೆಯಲು ಪ್ಲೇ ಸ್ಟೋರ್ ಗೆ ಬಂದ ಚಿಂಗಾರಿ ಆಪ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗುತ್ತಿದ್ದಂತೆ ಅನೇಕರು ಚಿಂಗಾರಿಯತ್ತ ಮುಖಮಾಡಿದ್ದಾರೆ. ಅದರಲ್ಲೂ ಕಳೆದ 3 ತಿಂಗಳಿನಲ್ಲಿ ಚಿಂಗಾರಿ ಆಪ್ ಅನ್ನು 30 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ಚಿಂಗಾರಿ ಸಂಸ್ಥೆ ತಿಳಿಸಿದೆ.