ಕನ್ನಡ ಕಿರುತೆರೆಯಲ್ಲಿ ‘ರಾಜಾ ರಾಣಿ’, ‘ಹೂಮಳೆ ‘ ಸೇರಿದಂತೆ ಹಲವು ಧಾರಾವಾಹಿಗಳಲ್ಲಿಯೂ ನಟಿಸಿ, ರಿಯಾಲಿಟಿ ಶೋಗಲ್ಲಿ ಶೋನಲ್ಲೂ ಮಿಂಚಿದ ನಟಿ ಚಂದನಾ ಅನಂತಕೃಷ್ಣ. ಇತ್ತೀಚೆಗೆ ಚಂದನಾಗೆ ಮದುವೆ ಯೋಗ ಕೂಡಿಬಂದಿದೆ ಎಂಬ ಸುದ್ದಿ ಕೇಳಿಬಂದಿತ್ತು. ಅವರ ಪ್ರೀ-ವೆಡ್ಡಿಂಗ್ ವೀಡಿಯೋ ಸಹ ವೈರಲ್ ಆಗಿತ್ತು. ಇದೀಗ ಚಂದನಾ ಅವರ ಮದುವೆ ಪ್ರತ್ಯಕ್ಷ್ ಉದಯ್ ಎಂಬುವರ ಜೊತೆಗೆ ನಡೆದಿದೆ.
ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಚಿನ್ನುಮರಿ ಜಾಹ್ನವಿ ಪಾತ್ರದಲ್ಲಿ ನಟಿಸಿ ಫೇಮಸ್ ಆಗಿರುವ ಚಂದನಾ ಅನಂತಕೃಷ್ಣ ಅವರ ಬದುಕಿನಲ್ಲಿ ಇವತ್ತಿನಿಂದ ಹೊಸ ಅಧ್ಯಾಯ ಆರಂಭವಾಗಿದೆ. ನವೆಂಬರ್ 28ರಂದು ಪ್ರೀತಿಸಿದ ಹುಡುಗ ಪ್ರತ್ಯಕ್ಷ್ ಜೊತೆಗೆ ಚಂದನಾ ದಾಂಪತ್ಯದ ಬದುಕಿಗೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಇಬ್ಬರ ಮದುವೆಯು ನಡೆದಿದ್ದು, ಬಂಧು-ಮಿತ್ರರು, ಕಿರುತೆರೆ ಲೋಕದ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.