Chintamani : ಕೋಪದಲ್ಲಿ ಚಲಿಸುತ್ತಿದ್ದ ಟ್ರಕ್ ಚಕ್ರಕ್ಕೆ ಹೆಂಡತಿಯನ್ನ ತಳ್ಳಿದ ಗಂಡ – ಮಹಿಳೆ ಸಾವು..
ಪತಿ-ಪತ್ನಿಯರ ನಡುವೆ ನಡೆದ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕುಡಿದ ಅಮಲಿನಲ್ಲಿದ್ದ ಗಂಡ ಹೆಂಡತಿಯನ್ನ ಚಲಿಸುತ್ತಿದ್ದ ಟ್ರಕ್ ನ ಚಕ್ರಕ್ಕೆ ತಳ್ಳಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಹಳೆಯ ಬಸ್ ನಿಲ್ದಾಣ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತಳನ್ನು 44 ವರ್ಷದ ಸುಮೇರಾ ಸುಲ್ತಾನ ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಮುನಿಕೃಷ್ಣಪ್ಪನನ್ನ ಪೊಲೀಸರು ಬಂಧಿಸಿದ್ದಾರೆ. ಚೇಳೂರು ರಸ್ತೆ ಬಳಿ ವಾಸವಾಗಿದ್ದ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.
ಮುನಿಕೃಷ್ಣಪ್ಪ ಕುಡಿತದ ಚಟದ ಕಾರಣಕ್ಕೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. ದುಡಿದ ಹಣವೆನ್ನೆಲ್ಲ ಗಂಡ ಹೆಂಡಕ್ಕೆ ಖರ್ಚು ಮಾಡುತ್ತಿದ್ದ ಕಾರಣ ಹೆಂಡತಿ ಸುಮೇರಾ ಮನೆ ನಡೆಸಲು ಹರಸಾಹಸ ಪಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ದಂಪತಿ ಚಿಂತಾಮಣಿ ಸಮೀಪದ ಮುರುಗಮಲ್ಲಕ್ಕೆ ಭೇಟಿ ನೀಡಿ ಶನಿವಾರ ಬೆಳಗ್ಗೆ ವಾಪಸಾಗಿದ್ದರು. ಹಳೆ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಪತಿ ಇದ್ದಕ್ಕಿದ್ದಂತೆ ಅವಳನ್ನು ಟ್ರಕ್ ನಡಿಗೆ ತಳ್ಳಿದ್ದಾನೆ ಮಹಿಳೆ ಮೇಲೆ ಟ್ರಕ್ ಹತ್ತಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಹಿಂದಿನ ದಿನ ಸಾಕಷ್ಟು ಮದ್ಯ ಸೇವಿಸಿದ್ದ ಮತ್ತು ಅಪರಾಧ ಎಸಗಿದಾಗಲೂ ನಶೆಯಲ್ಲಿದ್ದ ಎಂದು ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ತಿಳಿಸಿದ್ದಾರೆ. ಟ್ರಕ್ ಡ್ರೈವರ್ ದೂರದಿಂದಲೇ ದಂಪತಿಗಳ ಜಗಳ ಗಮನಿಸಿ ಟ್ರಕ್ ವೇಗ ಕಡಿಮೆ ಮಾಡಿದ್ದ. ಆದರೇ ಆಕೆಯನ್ನ ಚಕ್ರಕ್ಕೆ ತಳ್ಳಿದ್ದರಿಂದ ಸಾವಿನಿಂದ ಪಾರಾಗಲು ಸಾಧ್ಯವಿಲ್ಲ.
Chintamani: Husband and wife died after pushing their wife on the wheel of a moving truck in anger.








