ಮೆಗಾ ಅಭಿಮಾನಿಗಳಿಗೆ ಚಿರು ಬರ್ತ್ ಡೇ ಗಿಫ್ಟ್
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಶುಭವಾರ್ತೆ. ಈ ತಿಂಗಳ 22 ರಂದು ಅವರ ಹುಟ್ಟಿದ ದಿನ. ಈ ಸಂದರ್ಭವಾಗಿ ಫ್ಯಾನ್ಸ್ ಗೆ ಬರ್ತ್ ಡೇ ಗಿಫ್ಟ್ ನೀಡಲಿದ್ದಾರೆ ಚಿರಂಜೀವಿ.
ಅವರು ನಟಿಸಿರುವ ಗಾಡ್ ಫಾದರ್ ಟೀಸರ್ 21 ರಂದು ಬಿಡುಗಡೆಗೊಳ್ಳಲಿದೆ. ಈ ಸಂಬಂಧ ಚಿತ್ರತಂಡ ಚಿರಂಜೀವಿ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಮೋಹನ್ ರಾಜಾ ನಿರ್ದೇಶನದ ಈ ಸಿನಿಮಾವನ್ನು ಕೊಣಿದೆಲಾ ಸುರೇಖ ಸಮರ್ಪಣೆಯಲ್ಲಿ ಆರ್ ಬಿ ಚೌಧರಿ, ಎನ್ ವಿ ಪ್ರಸಾದ್ ನಿರ್ಮಿಸುತ್ತಿದ್ದಾರೆ.
ಈ ಸಿನಿಮಾ ದಸರಾಗೆ ರಿಲೀಸ್ ಆಗಲಿದೆ. ಸಲ್ಮಾನ್ ಖಾನ್, ನಯನರಾತಾ, ಪೂರಿ ಜಗನ್ನಾಥ್, ಸತ್ಯದೇವ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾಗೆ ತಮನ್ ಸಂಗೀತ ನೀಡಿದ್ದರೇ ನೀರವ್ ಷಾ ಅವರ ಕ್ಯಾಮೆರಾ ವರ್ಕ್ ಇದೆ.