Chiranjeevi-Pawan Kalyan : ಪವನ್ ಕಲ್ಯಾಣ್ ಬರ್ತ್ ಡೇಗೆ ಚಿರು ಮೆಗಾ ವಿಶ್
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹೀಗಾಗಿ ಅವರ ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಅದರಂತೆ ಮೆಗಾ ಬ್ರದರ್, ಮೆಗಾಸ್ಟಾರ್ ಚಿರಂಜೀವಿ ಅವರು ಟ್ವಿಟ್ಟರ್ ನಲ್ಲಿ ಒಂದು ಸ್ಪೇಷನ್ ವಿಶ್ ಮಾಡಿದ್ದಾರೆ.

ತನ್ನ ಆಸೆ, ಆಶಯ ಎಲ್ಲವೂ ಜನಹಿತವೇ, ತಾನು ನಂಬಿದ ಸಿದ್ದಾಂತಕ್ಕಾಗಿ ಎಂದಿಗೂ ಪ್ರಾಮಾಣಿಕತೆಯೊಂದಿಗೆ, ಚಿತ್ತಶುದ್ಧಿಯಿಂದ ಶ್ರಮಿಸುವ ಪವನ್ ಕಲ್ಯಾಣ್ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುತ್ತಾ, ಆಶೀರ್ವಾದಿಸುತ್ತಾ ಪವನ್ ಕಲ್ಯಾಣ್ ಗೆ ಹುಟ್ಟುಹಬ್ಬದ ಶುಭಾಶಯಗಳು.. ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಹರಿಹರ ವೀರಮಲ್ಲು ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಗಿಫ್ಟ್ ನೀಡಲಾಗಿದೆ. ಪವರ್ ಗ್ಲಾನ್ಸ್ ಹೆಸರಲ್ಲಿ ಮೂವಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಕ್ರಿಶ್ ಜಾಗರ್ಲಮೂಡಿ ನಿರ್ದೇಶನವಿದೆ.







