chiru sarja
ಚಿರಂಜೀವಿ ಸರ್ಜಾ ನಮ್ಮಗಲಿ ನಾಲ್ಕು ತಿಂಗಳು ಕಳೆದಿದೆ. ಇಂದು ಚಿರು ಸರ್ಜಾ ಅವರ ಜನುಮದಿನವನ್ನು ಅಭಿಮಾನಿಗಳು, ಕುಟುಂಬದವರು ಆಚರಿಸುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಅರ್ಜುನ್ ಸರ್ಜಾ, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್
‘ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಚಿರು’ ಎಂದು ದರ್ಶನ್ ವಿಶ್ ಮಾಡಿದ್ದು, ”ರಾಜಮಾರ್ತಾಂಡ ಚಿತ್ರದ ಇಂಟ್ರೋ ಸಾಂಗ್ ಇಂದು ಬಿಡುಗಡೆಯಾಗಿದೆ. ನೋಡಿ ಹರಸಿ” ಎಂದು ಪ್ರಾರ್ಥಿಸಿದ್ದಾರೆ.
ಕಿಚ್ಚ ಸುದೀಪ್
”ಅವರನ್ನು ಪ್ರೀತಿಸುತ್ತಿದ್ದ ಮತ್ತು ಅವರ ಬಗ್ಗೆ ತಿಳಿದಿದ್ದ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸದಾ ನಗುತ್ತಿದ್ದ ವ್ಯಕ್ತಿ ಹಾಗೂ ವಿಷಯಗಳನ್ನು ಬಹಳ ಚೆನ್ನಾಗಿ ಸ್ವೀಕರಿಸುತ್ತಿದ್ದ. ಸ್ವರ್ಗದಲ್ಲಿ ಸ್ಥಾನ ಪಡೆದುಕೊಂಡಿದ್ದು, ಶಾಂತಿಯಿಂದ ನೆಲೆಸಿದ್ದಾನೆ ಎಂದು ನಂಬಿದ್ದೇನೆ. ಲವ್ ಯೂ ಸಹೋದರ” ಎಂದು ಬರೆದುಕೊಂಡಿದ್ದಾರೆ.
ಅರ್ಜುನ್ ಸರ್ಜಾ
”36 ವರ್ಷಗಳ ಹಿಂದೆ ನೀವು ಹುಟ್ಟಿದಾಗ ನಾನು ಸಂತೋಷದಿಂದ ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ … ನಿನ್ನ ಹುಟ್ಟುಹಬ್ಬದಂದು ನಾನು ಈ ಮಾತುಗಳನ್ನು ಬರೆಯುತ್ತೇನೆ ಎಂದು ನನ್ನ ಹುಚ್ಚು ಕನಸಿನಲ್ಲಿ ಎಂದಿಗೂ ಯೋಚಿಸಲಿಲ್ಲ.. ಯಾವಾಗಲೂ ನನ್ನ ಆಲೋಚನೆಗಳಲ್ಲಿ ನೀನು ಇದ್ದೀಯಾ ಮಗನೇ. ನನ್ನ ಮಗುವನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಸಿಂಪಲ್ ಸುನಿ
“ವಾಯುಪುತ್ರ”ನಾಗಿ ಬಂದು ಎಲ್ಲರ ಮನದಲ್ಲೂ ಹಚ್ಚಹಸಿರಾಗಿ ಉಳಿದಿರುವ “ರಾಜಮಾರ್ತಾಂಡ” ಚಿರು ಸರ್ಜಾ ರವರ ಹುಟ್ಟುಹಬ್ಬದ ನೆನಪುಗಳು …ನೀವು ಬೆಳ್ಳಿತೆರೆಯಲ್ಲಿ ಎಂದೆಂದಿಗೂ ಜೀವಂತ” ಎಂದು ಟ್ವೀಟ್ ಮಾಡಿದ್ದಾರೆ.
ಸೃಜನ್ ಲೋಕೇಶ್
”ಇಂದು ನನ್ನ ಪ್ರೀತಿಯ ಆತ್ಮೀಯ ಗೆಳೆಯ, ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಹುಟ್ಟಿದ ದಿನ. ಅವ್ನು ಇವತ್ತು ದೈಹಿಕವಾಗಿ ನಮ್ಮೊಟ್ಟಿಗೆ ಇರದೇ ಇರಬಹುದು. ಆದ್ರೆ ಯಾವತ್ತಿಗೂ ನಮ್ಮಲ್ಲಿ ಚಿರಂಜೀವಿಯಾಗಿರುತ್ತಾನೆ. ಎಂದೆಂದೂ ಚಿರು ಅಮರ…”
ಪ್ರಜ್ವಲ್ ದೇವರಾಜ್
“ ಜನ್ಮದಿನದ ಶುಭಾಶಯಗಳು!! ನೀವು ನನ್ನ ಹೃದಯದಲ್ಲಿ ಮತ್ತು ಇತರ ಹೃದಯಗಳ ಕೋಟಿಯಲ್ಲಿ ಶಾಶ್ವತವಾಗಿ ಜೀವಿಸುವಿರಿ !!”
chiru sarja
ಭಾವುಕರಾಗಿ ಪ್ರೀತಿಯ ಪತಿ ‘ಚಿರು’ಗೆ ಹುಟ್ಟುಹಬ್ಬದ ಶುಭಕೋರಿದ ಮೇಘನಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel