ಬೆಂಗಳೂರು, ಜೂನ್ 7: ಇಂದು ಎಲ್ಲರನ್ನೂ ಬಿಟ್ಟು, ಬಾರದ ಲೋಕಕ್ಕೆ ತೆರಳಿರುವ ನಟ ಚಿರಂಜೀವಿ ಸರ್ಜಾ ನಿನ್ನೆಯಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಸಹೋದರ ಧೃವ ಸರ್ಜಾ ಜೊತೆಗಿನ ಪೋಟೋ ವೊಂದನ್ನು ಹಂಚಿಕೊಂಡಿದ್ದರು. ಅಂದು-ಇಂದು ನಾವೆಲ್ಲರೂ ಒಂದೇ. ನೀವು ಏನ್ ಹೇಳ್ತೀರಿ ಎಂದು ಆ ಪೋಟೋ ಗೆ ಅಡಿಬರಹವನ್ನು ನೀಡಿದ್ದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದ ಚಿರಂಜೀವಿ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳೊಂದಿಗೆ ಸಮಯವನ್ನು ಕಳೆಯುತ್ತಿದ್ದರು. ನಿನ್ನೆ ಸಹೋದರ ಧೃವ ಸರ್ಜಾ ಜೊತೆಗಿನ ಹಳೆಯ ಮತ್ತು ಈಗಿನ ಪೋಟೋವೊಂದನ್ನು ಹಂಚಿಕೊಂಡಿದ್ದು ಅಂದು-ಇಂದು ನಾವೆಲ್ಲರೂ ಒಂದೇ. ನೀವು ಏನ್ ಹೇಳ್ತೀರಿ ಎಂದು ಬರೆದು ಕೊಂಡಿದ್ದರು.
ನಿನ್ನೆ ರಾತ್ರಿಯ ಸಮಯ ಚಿರಂಜೀವಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಅಪಾಯಿಂಟ್ ಮೆಂಟ್ ತೆಗೆದುಕೊಂಡಿದ್ದರು. ಆದರೆ ಇಂದು ಸಂಜೆ 4 ಗಂಟೆ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ.







