Chithradurga : ಪ್ರೀತಿಸಿ ಮದುವೆಯಾದ ನಂತರ ಮತಾಂತರಗೊಳ್ಳದಕ್ಕೆ ಕೊಲೆಗೆ ಯತ್ನ..!!!
ಪ್ರೀತಿಸಿ ಮದುವೆಯಾದ ಹುಡುಗಿ ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದಕ್ಕೆ ಆಕೆಯ ಮೇಲೆ ಕೊಲೆ ಯತ್ನ ನಡೆದಿರುವ ಘಟನೆ ಇದೀಗ ಚಿತ್ರದುರ್ಗದಲ್ಲಿ ನಡೆದಿದೆ..
ಹೌದು..!
ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮತಾಂತರವಾಗಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನ ಪತಿ ಕೊಲೆ ಮಾಡಲು ಯತ್ನಿಸಿದ್ದಾನೆ..
ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಉಮಾ ಎಂಬಾಕೆಗೆ ಆರೋಪಿ ಖಾದರ್ ಎಂಬಾತನ ಪರಿಚಯವಾಗಿತ್ತು.. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಸ್ವಿಇಚ್ಛೆಯಿಂದಲೇ ಮದುವೆಯೂ ಆಗಿದ್ದದ್ದರು..
ಆದ್ರೆ ಖಾದರ್ ಮದುವೆಯ ನಂತರ ತನ್ನ ಅಸಲಿ ಬಣ್ಣ ತೋರಿಸಿದ್ದಾನೆ.. ಆಕೆಗೆ ಮತಾಂತರಗೊಳ್ಳುವಂತೆ ಹಿಂಸಿಸಿದ್ದಾನೆ.. ಈ ಒತ್ತಡಕ್ಕೊಳಗಾದ ಉಮಾಳ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿದೆ.. ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈ ವೇಳೆ ಖಾದರ್, ಉಮಾಗೆ ಚಿತ್ರಹಿಂಸೆ ನೀಡಿ, ಆಕೆಯ ಖಾಸಗಿ ಅಂಗಾಂಗಾಗಳ ಮೇಲೆ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ.
ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯಾರು ಇಲ್ಲದ ವೇಳೆ ಉಮಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಖಾದರ್ ಯತ್ನಿಸಿದ್ದಾನೆ ಎಂದು ಉಮಾ ಆರೋಪಿಸಿದ್ದಾರೆ.
ಸದ್ಯ ಸಂಬಂಧಿ ವಿಶ್ವನಾಥ್ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ ಉಮಾ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.