Chitradurga | ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ
ಚಿತ್ರದುರ್ಗ : ಒಂದಲ್ಲಾ ಒಂದು ವಿವಾದದ ಕೇಂದ್ರಬಿಂದುವಾಗುತ್ತಿರುವ ಮುರುಘಾ ಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಈ ಮಗು ಯಾರದ್ದು ? ಇಲ್ಲಿಗೆ ತಂದು ಬಿಟ್ಟರು ಯಾರು ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಆಗಷ್ಟ್ 26 ರಂದು ಮುರುಘಾಶ್ರೀಗಳ ವಿರುದ್ಧ ಫೊಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಸ್ಥಳಾಂತರ ಮಾಡಲಾಯಿತು.
ಅದೇ ಸಂದರ್ಭದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.
ಮಾಹಿತಿ ಪ್ರಕಾರ ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಿಲ್ಲ. ಪೋಷಕರ ಪತ್ತೆಗಾಗಿ ಮಕ್ಕಳ ರಕ್ಷಣಾ ಘಟಕ ಪತ್ರಿಕಾ ಜಾಹೀರಾತು ನೀಡಿದೆ.
ಈ ಹೆಣ್ಣುಮುಗುವಿಗೆ ಚಿಗುರು ಎಂದು ಹೆಸರಿಡಲಾಗಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಮಗುವು ಮುರುಘಾಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಸಿಕ್ಕಿದೆ.
ಈ ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಾಗಿಲ್ಲ. ಹೀಗಾಗಿ ವಿವರ ಗೊತ್ತಿದ್ದವರು. ಇಲ್ಲದೇ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಥವಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಪತ್ರಿಕಾ ಜಾಹೀರಾತು ನೀಡಲಾಗಿದೆ.