ದೆಹಲಿಯಲ್ಲಿ ಎಎಪಿ ಸಂಭ್ರಮಾಚರಣೆ ವೇಳೆ ಕಾಣಿಸಿಕೊಂಡ ಚೋಟಾ ಮಫ್ಲರ್ ಮ್ಯಾನ್ ವೇಷಧಾರಿಯ ಫೋಟೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ರಂತೆ ಟೋಪಿ ಧರಿಸಿ, ಕನ್ನಡಕ, ಸ್ವೆಟರ್ ಹಾಗೂ ಮಫ್ಲರ್ ಸುತ್ತಿಕೊಂಡು ಪುಟ್ಟ ಬಾಲಕನೊರ್ವ ನೀಡಿದ ಫೋಟೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವರ್ಷ ವಯಸ್ಸಿನ ಅವ್ಯಾನ್ ಯಥಾವತ್, ಅರವಿಂದ್ ಕೇಜ್ರಿವಾಲ್ ರೀತಿಯಲ್ಲಿಯೇ ಪೋಸು ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾನೆ.

ಅವ್ಯಾನ್ ಯಥಾವತ್ ಆಪ್ ಪಕ್ಷದ ಕಟ್ಟಾ ಬೆಂಬಲಿಗ ರಾಹುಲ್ ತೋಮರ್ ಮತ್ತು ಮೀನಾಕ್ಷಿ ಅವರ ಪುತ್ರನಾಗಿದ್ದಾನೆ. ಈ ‘ಬೇಬಿ ಕೇಜ್ರಿವಾಲ್’ ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಮ್ ಆದ್ಮಿ ಪಾರ್ಟಿ ಕೂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ‘ಮಫ್ಲರ್ ಮ್ಯಾನ್’ ಎಂದು ಬರೆದುಕೊಂಡಿದೆ. ಇನ್ನೊಂದು ಪೋಸ್ಟ್ ನಲ್ಲಿ “ನಮ್ಮ ಈ ದಿನದ ಸ್ಟಾರ್” ಎಂದು ಬರೆದುಕೊಂಡಿದೆ.








