ಗಣರಾಜ್ಯೋತ್ಸವದ ಶುಭಕೋರಿದ ಕ್ರಿಸ್ ಗೇಲ್ Chris Gayle On India’s 73rd Republic Day Saaksha tv
ನವದೆಹಲಿ : ಕೊರೊನಾ ಸೋಂಕಿನ ಮೂರನೇ ಅಲೆಯ ನಡುವೆ ದೇಶದಾದ್ಯಂತ 73 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ದೇಶದ ಎಲ್ಲಾ ಗಣ್ಯರು ದೇಶದ ಜನರಿಗೆ ಶುಭಕೋರಿದ್ದಾರೆ.
ಇದರಲ್ಲಿ ವಿಶೇಷವೆಂಬಂತೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್, ಟ್ವಿಟ್ಟರ್ ನಲ್ಲಿ ಭಾರತೀಯರಿಗೆ ಶುಭ ಕೋರಿದ್ದಾರೆ.
ನಾನು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ಭಾರತವನ್ನು ಅಭಿನಂದಿಸಲು ಬಯಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನಃ ದೃಢೀಕರಿಸುವ ವೈಯಕ್ತಿಕ ಸಂದೇಶದಿಂದ ನಾನು ಎಚ್ಚರಗೊಂಡಿದ್ದೇನೆ.
ಯೂನಿವರ್ಸಲ್ ಬಾಸ್ನಿಂದ ಭಾರತೀಯರಿಗೆ ಅಭಿನಂದನೆಗಳು ಮತ್ತು ಪ್ರೀತಿ ಇದೆ” ಎಂದು ಗೇಲ್ ಬರೆದುಕೊಂಡಿದ್ದಾರೆ.
ಕ್ರಿಸ್ ಗೇಲ್ ಟ್ವೀಟ್ ಗೆ ಭಾರತೀಯರು ಕೂಡ ರೀಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕ್ರಿಸ್ ಐಪಿಎಲ್ ನಿಂದಾಗಿ ಭಾರತದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.









