IPL 2022 | ಆರ್ ಸಿಬಿಗಾಗಿ ಕಪ್ ಗೆದ್ದಿಲ್ಲ ಅನ್ನೋ ನೋವಿದೆ : ಗೇಲ್
ಆರ್‌ಸಿಬಿ ಜೊತೆಗಿನ ನನ್ನ ಬಾಂಧವ್ಯ ತುಂಬಾ ಗಟ್ಟಿಯಾಗಿದೆ. ಆ ತಂಡಕ್ಕಾಗಿ ಪ್ರಶಸ್ತಿ ಗೆಲ್ಲಿಸಿ ಕೊಡೋಕೆ ಆಗಲಿಲ್ಲ ಎಂಬ ನೋವಿದೆ.
ಆದರೆ ಆರ್ ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ್ದು ಖುಷಿ ಇದೆ ಎಂದು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಸ್ಟಾರ್ .. ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಬಾರಿ ಐಪಿಎಲ್ ಗೆ ದೂರ ಇರೋದು ಗೊತ್ತಿರುವ ವಿಚಾರವೇ.
ಕಳೆದ ವರ್ಷ ಐಪಿಎಲ್ ನಲ್ಲಿ ಗೇಲ್, ಬಯೋಬಬಲ್‌ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಟೂರ್ನಿಯಿಂದ ಹೊರನಡೆದರು.
ಜೊತೆಗೆ ಈ ಬಾರಿಯ ಮೆಗಾ ಹರಾಜಿನಲ್ಲೂ ಅವರು ಭಾಗವಹಿಸಲಿಲ್ಲ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕ್ರಿಸ್ ಗೇಲ್, ಕಳೆದ ಕೆಲ ಐಪಿಎಲ್ ಸೀಸನ್ ನಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ನನಗೆ ಐಪಿಎಲ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ ಬಳಿಕವೂ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಆರೋಪಿಸಿರುವ ಗೇಲ್, ಕ್ರಿಕೆಟ್ ಬಿಟ್ಟು ನಮ್ಮದೇ ಯಾದ ಜೀವನ ಇರುತ್ತದೆ.
ಅದಕ್ಕಾಗಿಯೇ ನಾನು ಈ ಬಾರಿಯ ಐಪಿಎಲ್ ನಿಂದ ದೂರ ಇದ್ದೇನೆ ಎಂದಿದ್ದಾರೆ. ಮುಂದಿನ ಬಾರಿ ಖಂಡಿತವಾಗಿ ಐಪಿಎಲ್ ನಲ್ಲಿ ಆಡುತ್ತೇನೆ. ಯಾವ ತಂಡಕ್ಕೆ ನನ್ನ ಅವಶ್ಯಕತೆ ಇರುತ್ತೋ ಆ ತಂಡದ ಪರ ಆಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಆರ್ ಸಿಬಿ ಬಗ್ಗೆ ಮಾತನಾಡಿದ ಗೇಲ್, ನಾನು ಆರ್ ಸಿಬಿ ಪರ ಸಾಕಷ್ಟು ಎಂಜಾಯ್ ಮಾಡುತ್ತಾ ಆಡಿದ್ದೇನೆ, ಆರ್ ಸಿಬಿ ಜೊತೆ್ಗಿನ ನನ್ನ ಅನುಬಂಧ ಗಟ್ಟಿಯಾಗಿದೆ.
ಆದ್ರೆ ಆ ತಂಡಕ್ಕೆ ಟೈಟಲ್ ಗೆಲ್ಲಿಸಿಕೊಟ್ಟಿಲ್ಲ ಅನ್ನೋ ನೋವು ನನ್ನಲ್ಲಿದೆ. ಆದ್ರೂ ಐಪಿಎಲ್ ನಲ್ಲಿ ನನ್ನ ಸಾಕಷ್ಟು ದಾಖಲೆಗಳು ಆರ್ ಸಿಬಿ ಪರವೇ ಇದೆ ಎಂದಿದ್ದಾರೆ.
chris-gayle-reveals-reason-why-he-opted-out-ipl








