ಕಿಸ್ಮಸ್ ಸಂಭ್ರಮ: ಕ್ರೈಸ್ತ ಬಾಂಧವರಿಗೆ ಶುಭಕೋರಿದ ರಾಷ್ಟ್ರಪತಿ, ಮೋದಿ, ಬಿ ಎಸ್ ವೈ..!
ಇಂದು ಇಡೀ ವಿಶ್ವಾದ್ಯಂತ ಕ್ರಿಸ್ ಮಸ್ ಸಂಭ್ರಮಾಚರಣೆ ಮನೆ ಮಾಡಿದೆ. ಕ್ರೈಸ್ತ ಬಾಂಧವರು ಹಬ್ಬವನ್ನ ಅತ್ಯಂತ ಶ್ರದ್ಧೆ ಭಕ್ತಿ, ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಕೋವಿಡ್ ಹಾವಳಿಯಿಂದಾಗಿ ಪ್ರತಿ ವರ್ಷದಂತೆ ಈ ಬಾರಿ ಅಷ್ಟು ಅದ್ಧೂರಿಯಾಗಿ ಕ್ರಿಸ್ ಮಸ್ ಆಚರಣೆ ಮಾಡಲಾಗುತ್ತಿಲ್ಲ. ಕೋವಿಡ್ ನಿಂದಾಗಿ ಕ್ರಿಸ್ ಮಸ್ ಸಡಗರ , ಸಂಭ್ರಮ ಈ ಬಾರಿ ಕೊಂಚ ಕಡಿಮೆಯಾಗಿದೆ. ಕೋವಿಡ್ ನಿಯಮಾವಳಿಗಳನ್ನ ಪಾಲಿಸಿ ಹಬ್ಬ ಆಚರಣೆ ಮಾಡಲಾಗ್ತಿದೆ.
ಇನ್ನೂ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು , ರಾಜ್ಯ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕ್ರೈಸ್ತ ಬಾಂಧವರಿಗೆ ವಿಶಸ್ ತಿಳಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು ‘ಯೇಸುಕ್ರಿಸ್ತನ ಜಯಂತಿ ಅಂಗವಾಗಿ ಕ್ರಿಸ್ಮಸ್ ಹಬ್ಬವನ್ನು ಶ್ರದ್ಧೆ ಹಾಗೂ ಸಂಭ್ರಮದ ಪ್ರತೀಕವಾಗಿ ಆಚರಣೆ ಮಾಡಲಾಗುವುದು’ ಎಂದಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತಾಗಿ ಟ್ವೀಟ್ ಮಾಡಿ, ‘ಕ್ರೈಸ್ತ ದೇವರ ಜೀವನ ಮತ್ತು ತತ್ವಗಳು ವಿಶ್ವದ ಕೋಟ್ಯಂತರ ಜನರಿಗೆ ಸ್ಪೂರ್ತಿ ತುಂಬಿದೆ. ಎಲ್ಲರೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ’ ಎಂದಿದ್ದಾರೆ.
ಜನರಿಗೆ ಹೊಸ ವರ್ಷದ ಉಡುಗೊರೆ – ಉದ್ಘಾಟನೆಗೆ ಸಜ್ಜಾಗಿದೆ ಭಾರತದ ಮೊದಲ ಸ್ವಯಂಚಾಲಿತ ಚಾಲಕರಹಿತ ಮೆಟ್ರೋ ರೈಲು
ಇನ್ನೂ ಸಿಎಂ ಬಿ ಎಸ್ ಯಡಿಯೂರಪ್ಪನವರು ಸಹ ಈ ಸಂಬಂಧ ಟ್ವೀಟ್ ಮಾಡಿದ್ದು, ‘ಎಲ್ಲ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕೊರೋನಾ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿ ಸೀಮಿತ ಆಚರಣೆಗಳಿರಲಿ, ಮಾಸ್ಕ್ ಧರಿಸಿ, ಭೌತಿಕ ಅಂತರ ಕಡ್ಡಾಯ ಪಾಲಿಸಿ. ಆದಷ್ಟೂ ಮನೆಗಳಲ್ಲಿಯೇ ದೇವರನ್ನು ಆರಾಧಿಸಿ. ನಾಡಿನಲ್ಲಿ ಆರೋಗ್ಯ, ಶಾಂತಿ, ಸಮೃದ್ಧಿಗಳು ನೆಲೆಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ’ ಎಂದು ವಿಶ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel