Cinema Hall : ಥಿಯೇಟರ್ ಗಳಲ್ಲಿ ಹೊರಗಿನ ಆಹಾರ ನಿರ್ಬಂಧಿಸಬಹುದು; ಆದರೇ ಕುಡಿಯುವ ನೀರು ಉಚಿತವಾಗಿ ಕೊಡಬೇಕು – ಸುಪ್ರೀಂ ಕೋರ್ಟ್…
ಚಿತ್ರಮಂದಿರಗಳ ಮಾಲೀಕರು ತಮ್ಮ ಥಿಯೇಟರ್ ಆವರಣದ ಒಳಗಡೆ ಆಹಾರ ಮತ್ತು ಪಾನೀಯಗಳ ಮೇಲಿನ ನಿಯಮಗಳನ್ನ ವಿಧಿಸಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು, ಚಿತ್ರಮಂದಿರಗಳ ಮಾಲೀಕರು ತಮ್ಮ ಆವರಣದಲ್ಲಿ ಹೊರಗಿನ ಆಹಾರವನ್ನು ಅನುಮತಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ಚಲನಚಿತ್ರ ಮಂದಿರಗಳು ಮಾಲೀಕರ ಖಾಸಗಿ ಆಸ್ತಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಮತ್ತು ಕಲ್ಯಾಣಕ್ಕೆ ವಿರುದ್ಧವಾಗಿಲ್ಲದಿರುವವರೆಗೆ ಅವರು ನಿಯಮಗಳು ಮತ್ತು ಷರತ್ತುಗಳನ್ನು ಹೊಂದಲು ಅರ್ಹರಾಗಿರುತ್ತಾರೆ ಎಂದು ಪೀಠ ತಿಳಿಸಿದೆ.
ಥಿಯೇಟರ್ಗಳ ಒಳಗೆ ಸಿನಿಮಾ ವೀಕ್ಷಕರು ತಮ್ಮದೇ ಆದ ಆಹಾರ ಪದಾರ್ಥಗಳು ಮತ್ತು ನೀರನ್ನು ಕೊಂಡೊಯ್ಯುವುದನ್ನ ನಿಷೇಧಿಸದಂತೆ ಚಿತ್ರಮಂದಿರಗಳ ಮಾಲೀಕರಿಗೆ ನಿರ್ದೇಶನ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಆದರೆ, ಎಲ್ಲಾ ಸಿನಿಮಾ ಹಾಲ್ಗಳು ಥಿಯೇಟರ್ಗಳಲ್ಲಿ ಎಲ್ಲಾ ಸಿನಿಮಾ ಪ್ರೇಕ್ಷಕರಿಗೆ ಆರೋಗ್ಯಕರ ಕುಡಿಯುವ ನೀರನ್ನು ಉಚಿತವಾಗಿ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಇದಲ್ಲದೆ, ಶಿಶು ಅಥವಾ ಮಗು ಪೋಷಕರೊಂದಿಗೆ ಬಂದಾಗ, ಅವರಿಗೆ ಸಮಂಜಸವಾದ ಆಹಾರವನ್ನು ಚಿತ್ರಮಂದಿರಗಳಲ್ಲಿ ಸಾಗಿಸಬಹುದು ಎಂದು ಕೋರ್ಟ್ ತಿಳಿಸಿದೆ.
Cinema Hall: Outside food may be restricted in theatres; But drinking water should be provided free – Supreme Court…








