cinema
ಟಾಪ್ 5 ಸಿನಿಮಾ ನ್ಯೂಸ್ Of The Day..!
ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಹೆಸರು..!
ಭಾರತೀಯ ಸಂಗೀತ ಲೋಕದ ಲೆಜೆಂಡ್ ಸ್ವರ ಮಾಂತ್ರಿಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿ ಸುಮಾರು 2 ತಿಂಗಳುಗಳ ಕಳೆದಿವೆ. ಇದೀಗ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಎಸ್ಪಿಬಿ ಅವರ ಕೊಡುಗೆಯನ್ನು ಸ್ಮರಿಸಿ ಗೌರವಾರ್ಥ ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಅವರ ಹೆಸರಿಟ್ಟಿದೆ. ಹೌದು ನೆಲ್ಲೂರಿನಲ್ಲಿರುವ ಸರ್ಕಾರಿ ಸಂಗೀತ ಮತ್ತು ನೃತ್ಯ ಶಾಲೆಗೆ ‘ಡಾ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಮತ್ತು ನೃತ್ಯ ಶಾಲೆ’ ಎಂದು ಮರುನಾಮಕರಣ ಮಾಡಲಾಗಿದೆ.
ವಿವರವಾಗಿ ಇಲ್ಲಿ ಓದಿ: ಸಂಗೀತ, ನೃತ್ಯ ಶಾಲೆಗೆ ಎಸ್ ಪಿಬಿ ಹೆಸರು : ಆಂಧ್ರ ಸರ್ಕಾರದಿಂದ ಮಹತ್ವದ ನಿರ್ಧಾರ..!
ಕ್ರಿಸ್ ಮಸ್ ಕೇಕ್ ತಯಾರಿಸಿದ ದರ್ಶನ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಕೆಲಸಕಾರ್ಯಗಳಿಂದ ಬಿಡುವು ಪಡೆದುಕೊಂಡು, ಸ್ನೇಹಿತರ ಜೊತೆಗೆ ಪ್ರವಾಸ, ಬೈಕ್ ರೈಡಿಂಗ್, ಅಂತ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಹೀಗೆ ಪ್ರವಾಸದಲ್ಲಿರುವ ದರ್ಶನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಇದೀಗ ಕ್ರಿಸ್ಮಸ್ ಕೇಕ್ ತಯಾರಿಸಿ ಸುದ್ದಿಯಲ್ಲಿದ್ದಾರೆ ಡಿ ಬಾಸ್.
ಹೌದು ಕ್ರಿಸ್ ಮಸ್ ಹಬ್ಬಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿರುವಾಗಲೇ ನಟ ದರ್ಶನ್ ಅವರು ಕೇಕ್ ತಯಾರಿಸಿದ್ದಾರೆ. ಕೇಕ್ ತಯಾರಿಸುತ್ತಿರುವ ದಚ್ಚು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಏಪ್ರನ್ ಧರಿಸಿ ಕೇಕ್ ತಯಾರಿಸುತ್ತಿರುವ ‘ದಾಸ’ ನ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಂದೇಶ್ ಹೋಟೆಲ್ ನ ಸಿಬ್ಬಂದಿ, ವ್ಯವಸ್ಥಾಪಕರೊಂದಿಗೆ ಸೇರಿ ದರ್ಶನ್ ಕೇಕ್ ತಯಾರಿಸಿದ್ದಾರೆ.
ವಿವರವಾಗಿ ಇಲ್ಲಿ ಓದಿ: ಕ್ರಿಸ್ ಮಸ್ ಕೇಕ್ ತಯಾರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!
ಮತ್ತೆ ವರ್ಕೌಟ್ ಶುರುಮಾಡಿದ ‘ಪೈಲ್ವಾನ್’..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷೆಯ ಪ್ಯಾಂಟಮ್ ಸಿನಿಮಾದ ಶೂಟಿಂಗ್ ಇನ್ನೇನು ಕಡೆಯ ಹಂತಕ್ಕೆ ತಲುಪಿದೆ. ಈಗಾಗಲೇ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ಕೇರಳ ಕಡೆಗೆ ಪಯಣ ಬೆಳಸಿದೆ. ಇದರ ನಡುವೆ ಸುದೀಪ್ ಅವರು ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಒಳ್ಳೆಯ ಆಹಾರ, ಯೋಗ್ಯವಾದ ಜೀವನ ಶೈಲಿ, ಸ್ವಲ್ಪ ಶಿಸ್ತು. ದೀರ್ಘ ಅಂತರದ ಬಳಿಕ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ. ಸುಮಾರು ಒಂದು ತಿಂಗಳಿಂದ ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಿದ್ದು, ಎಲ್ಲರನ್ನು ಸುಸ್ತಾಗಿಸಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಎದುರು ನೋಡುತ್ತಿದ್ದೀವಿ. ಡಿಸೆಂಬರ್ 4ರಿಂದ ಚಿತ್ರೀಕರಣ ಪ್ರಾರಂಭ’ ಎಂದು ಬರೆದುಕೊಂಡಿದ್ದಾರೆ.
ವಿವರವಾಗಿ ಇಲ್ಲಿ ಓದಿ: ಮತ್ತೆ ವರ್ಕೌಟ್ ಶುರುಮಾಡಿದ ‘ಪೈಲ್ವಾನ್’ : ಟ್ವೀಟ್ ಮೂಲಕ ಸುದೀಪ್ ಮಾಹಿತಿ..!
ಅಪ್ಪು ಅಭಿಮಾನಿಗಳಿಗೆ ಸಂಜೆ ಸಿಗಲಿದೆ ಭರ್ಜರಿ ಗುಡ್ ನ್ಯೂಸ್..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇಂದು ಸಂಜೆ ಸರಿಯಾಗಿ 4.30ಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ‘ಪ್ರೋಮೊ’ ಬಿಡುಗಡೆ ಆಗಲಿದೆ. ‘ಪವರ್ ಆಫ್ ಯುತ್’ ಪ್ರೊಮೊ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಬಗ್ಗೆ ನಿರ್ದೇಶಕ ಸಂತೋಶ್ ಆನಂದ್ ರಾಮ್ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿವರವಾಗಿ ಇಲ್ಲಿ ಓದಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂಜೆ ಸಿಗಲಿದೆ ಭರ್ಜರಿ ಗುಡ್ ನ್ಯೂಸ್..!

5ನೇ ಬಾರಿಗೆ ಒಂದಾದ ಉಪೇಂದ್ರ – ನಾಗಣ್ಣ ಜೋಡಿ..!
ರಾಯಕೀಯದ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯ್ಯಲ್ಲಿ ಅನೇಕ ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಉಪೇಂದ್ರ ಅವರ ಅಭಿಮಾನಿಗಳಿಗೆ ಇದೀಗ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಉಪ್ಪಿ ಅವರು ಇದೀಗ ಐತಿಹಾಸಿಕ ಸಿನಿಮಾ ಮಾಡಲು ಮುಂದಾಗಿದ್ದು, ಚಿತ್ರಕ್ಕೆ ‘ಕುರುಕ್ಷೇತ್ರ’ ಖ್ಯಾತಿಯ ನಿರ್ದೇಶಕ ನಾಗಣ್ಣ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಈ ಸುದ್ದಿ ಖಚಿತವಾದ್ರೆ ನಾಗಣ್ಣ ಮತ್ತು ಉಪೇಂದ್ರ ಕಾಂಬಿನೇಷನ್ ಸತತ 5ನೇ ಬಾರಿಗೆ ಒಂದಾದಂತಾಗುತ್ತೆ. ಈ ಹಿಂದೆ ಕುಟುಂಬ, ಗೌರಮ್ಮ, ಗೋಕರ್ಣ, ದುಬೈ ಬಾಬುನಂತಹ ಹಿಟ್ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಕಮಾಲ್ ಮಾಡಿದೆ.
ವಿವರವಾಗಿ ಇಲ್ಲಿ ಓದಿ: 5ನೇ ಬಾರಿಗೆ ಒಂದಾದ ಉಪೇಂದ್ರ – ನಾಗಣ್ಣ ಜೋಡಿ : ಐತಿಹಾಸಿಕ ಚಿತ್ರಕ್ಕೆ ತಯಾರಿ..!
cinema
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel












