Cinema Updates : ಟಾಪ್ 4 ಸಿನಿಮಾ ಸುದ್ದಿಗಳು…!!!
“ಲಾಲಿ ಲಾಲಿ ಮಲಗು ರಾಜಕುಮಾರ…”
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಟಿವಿ ವಿಕ್ರಮ ತಂಡದಿಂದ ಇಂದು ಗೀತ ನಮನ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ನಲ್ಲಿ ನಡೆದ ಈ ಗೀತ ನಮನ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಸದಾಶಿವ ಶೆಣೈ, ಮಹೇಂದ್ರ ವಿಕ್ರಮ್ ಹೆಗ್ಡೆ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಲಾಲಿ ಲಾಲಿ ಮಲಗು ಹಾಡು ಬಿಡುಗಡೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪು ಏಳು ವರ್ಷದ ಮಗುವಿದ್ದಾಗಲೇ ಹಾಡಲು ಶುರು ಮಾಡಿದರು, ಚಿಕ್ಕ ಹುಡ್ಗ ಇದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು. ಹಿಟ್ಸ್ ಕೊಟ್ಟರು, ರಿಯಾಲಿಟಿ ಶೋ ಮಾಡಿದರು. ನನಗೆ ಮೈಂಡ್ ಬ್ಲಾಕ್ ಆಗಿದೆ. ಕುಂತು ನಿಂತ್ರು ಅಪ್ಪುನೇ ನೆನಪು ಆಗ್ತಾನೆ. ಈ ರೀತಿ ಹಾಡು ಕೇಳಿದರೆ ಅದರಿಂದ ಒಂದು ವಾರ ಹೊರಗಡೆ ಬರಲು ಆಗುವುದಿಲ್ಲ. ಅಷ್ಟು ಡೀಪ್ ಆಗಿ ಒಳಗಡೆ ಹೋಗುತ್ತೇವೆ ಎಂದು ಭಾವುಕರಾದರು.
ಗಾಳಿಪಟ 2 ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್…!!!
2008 ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸ್ಯಾಂಡಲ್ ಸಿನಿಮಾ ಗಾಳಿಪಟ… ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ , ದೂದ್ ಪೇಡ ನಟ ದಿಗಂತ್ , ಸಿಂಗರ್ ರಾಜೇಶ್ ಕೃಷ್ಣ ನಟಿಸಿ , ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದರು.. ಇವರ ಕಾಂಬಿನೇಷನ್ ಹೊಸ ಸೆನ್ಷೇಷನ್ ಸೃಷ್ಟಿ ಮಾಡಿತ್ತು.. ಇದೀಗ ಯೋಗರಾಜ್ ಭಟ್ , ಗೋಲ್ಡನ್ ಗಣೇಶ್ , ದಿಗಂತ್ ಕಾಂಬಿನೇಷಬನಲ್ಲೇ ಗಾಳಿಪಟ 2 ಸಿನಿಮಾ ಕೂಡ ಬರುತ್ತಿದೆ.. ಈಗಾಗಲೇ ಶೂಟಿಂಗ್ ಮುಗಿದಿದ್ದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಇದೀಗ ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ ಎನ್ನಲಾಗಿದೆ.
ಈ ವಿಷಯವನ್ನು ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ ಅವರೇ ಖಚಿತ ಪಡಿಸಿದ್ದಾರೆ. ಆನಂದ್ ಆಡಿಯೊಗೆ ಮಾರಾಟವಾದ ಸಂಗೀತದ ಹಕ್ಕುಗಳು ಸೇರಿದಂತೆ ಚಿತ್ರವು 8 ಕೋಟಿ ರೂಪಾಯಿಗೂ ಹೆಚ್ಚು ಪ್ರೀ-ರಿಲೀಸ್ ವಹಿವಾಟು ಮಾಡಿದೆ ಎಂದು ಕೂಡ ಹೇಳಲಾಗಿದೆ.
ಗಣೇಶ್ ಮತ್ತು ದಿಗಂತ್ ಜೊತೆಗೆ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ-ನಟ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
Mahesh Babu : ಸರ್ಕಾರು ವಾರಿ ಪಾಟ ಹೊಸ ರಿಲೀಸ್ ಡೇಟ್ ಘೋಷಣೆ…!!!
ಕೋವಿಡ್ ನಿಂದಾಗಿ ಪೋಸ್ಟ್ ಪೋನ್ ಆಗುತ್ತಲೇ ಇರುವ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾ ಇತ್ತೀಚೆಗೆ RRR ಸಿನಿಮಾಗಾಗಿ ಮತ್ತೆ ಬಿಡುಗಡೆ ದಿನಾಂಕ ಮುಂದೂಡಿತ್ತು.. ಈ ನಡುವೆ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.. ಅವರಿಗೆ ಒಂದು ಸಮಾಧಾನಕರ ಸಂಗತಿ ಸಿಕ್ಕಿದೆ..
ಹೌದು.. ಸರ್ಕಾರು ವಾರಿ ಪಾಠ ಸಿನಿಮಾ ತಮಡ ಹೊಸ ಬಿಡುಗಡೆ ದಿನಾಂಕವನ್ನ ಆಯ್ಕೆ ಮಾಡಿದ್ದು , ಇದೇ ದಿನ ಸಿನಿಮಾ ರಿಲೀಸ್ ಆಗುವುದು ಬಹುತೇಕ ಕನ್ ಫರ್ಮ್ . ಮಹೇಶ್ ಬಾಬುಗೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.. ಅಂದ್ಹಾಗೆ ಈ ಸಿನಿಮಾ ಮೇ 12, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಮಹೇಶ್ ಬಾಬು ಅಲ್ಟ್ರಾ-ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಿನಿಮಾದ ಮೇಕರ್ ಗಳು ಟ್ವೀಟ್ ಮಾಡಿ ಸಿನಿಮಾ ಮೇ 12 ಕ್ಕೆ ರಿಲೀಸ್ ಎಂದಿದ್ದಾರೆ.. ಅಂದ್ಹಾಗೆ ಈ ಸಿನಿಮಾದ ಮೊದಲ ಸಿಂಗಲ್, ಮೆಲೋಡಿ ಹಾಡು ಫೆಬ್ರವರಿ 14 ರಂದು ರಿಲೀಸ್ ಆಗಲಿದೆ. ಈ ರೊಮ್ಯಾಂಟಿಕ್ ಟ್ರ್ಯಾಕ್‌ಗೆ ಎಸ್ ತಮನ್ ಅವರ ಸಂಗೀತವಿರಲಿದೆ..
‘Radhe Shyam’ ರಿಲೀಸ್ ದಿನಾಂಕ ಫಿಕ್ಸ್
ಕೊರೊನಾ ಹಾವಳಿಯಿಂದಾಗಿ RRR , ರಾಧೆ ಶ್ಯಾಮ್ ಸೇರಿದಂತೆ ಹಲವು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಿಕೆಯಾಯ್ತು.. ಈ ನಡುವೆ ಇತ್ತೀಚೆಗೆ ಹರಿದಾಡಿದ್ದ ಸೆನ್ಷೇಷನಲ್ ಸುದ್ದಿಯಂತೆ , ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾಗೆ ಅಮೇಜಾನ್ ನಿಂದ ನೇರ ರಿಲೀಸ್ ಗಾಗಿ 350 ಕೋಟಿ ರೂ. ಆಫರ್ ಬಂದಿತ್ತು ಎನ್ನಲಾಗಿದೆ..
ಅಲ್ಲದೇ 400 ಕೋಟಿ ರೂಪಾಯಿಗೆ ನೆಟ್ ಫ್ಲಿಕ್ಸ್ ಆಫರ್ ಇಟ್ಟಿದ್ದು ಸಿನಿಮಾ ನೇರವಾಗಿ ಥಿಯೇಟರ್ ಗಳಲ್ಲಿಯೇ ರಿಲೀಸ್ ಆಗಲಿದೆ ಎನ್ನಲಾಗಿತ್ತು..
ಆದ್ರೀಗ ಊಹಾಪೋಹಗಳಿಗೆ ಅಂತ್ಯ ಹಾಡಿದೆ ಸಿನಿಮಾ ತಂಡ.. “ರಾಧೆ ಶ್ಯಾಮ್” ನಿರ್ಮಾಪಕರು ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಧರಿಸಿ ಆಗಿದೆ ಎನ್ನಲಾಗಿದೆ. ಚಿತ್ರವು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ..
ಮಾರ್ಚ್ 11 ಕ್ಕೆ ಸಿನಿಮಾ ರಿಲೀಸ್ ಬಹುತೇಕ ಖಚಿತ ಎನ್ನಲಾಗ್ತಿದೆ.. ಸಿನಿಮಾದ ಮೇಕರ್ಸ್ ಟಿ ಸಿರೀಸ್ ಮತ್ತು ಯುವಿ ಕ್ರಿಯೇಷನ್ಸ್ ಈ ದಿನಾಂಕವನ್ನು ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ..










