ಚೆನ್ನೆ: ಮಹಾಮಾರಿ ಕೊರೊನಾ ಅಬ್ಬರಕ್ಕೆ ಮಹಾರಾಷ್ಟç ನಂತರ ತಮಿಳುನಾಡು ಅಕ್ಷರಶಃ ನುಲುಗಿ ಹೋಗಿದೆ. ಪರಿಸ್ಥಿತಿ ನಿಭಾಯಿಸಲು ಸಿಎಂ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಮಾಡುತ್ತಿರುವ ಯಾವುದೇ ಪ್ರಯತ್ನಗಳು ಫಲಕೊಡುತ್ತಿಲ್ಲ. ಸಮುದಾಯದ ಹಂತದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಚೆಲ್ಲಿ ಕುಳಿತಂತೆ ಕಾಣುತ್ತಿದೆ.
ಕೊರೊನಾ ಆಘಾತದ ನಡುವೆಯೇ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸಂಚಲನ ಆರಂಭವಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾ ಅವಧಿಗೂ ಮೊದಲೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂಬ ಗುಸು ಗುಸು ಶುರುವಾಗಿದೆ.
ಬಿಜೆಪಿ ಸಹಾಯದಿಂದ ಶಶಿಕಲಾ ನಟರಾಜನ್‌ಗೆ ಆಗಸ್ಟ್ 14 ರಂದು ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ನಾಯಕ ಆಶೀವಾದಂ ಆಚಾರಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚುನಾವಣೆಗೆ ಇನ್ನು 11 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಶಶಿಕಲಾ ಜೈಲಿನಲ್ಲೇ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆ.
ಸದ್ಯ ಬಿಜೆಪಿ ಮುಖಂಡನ ಟ್ವೀಟ್ ಬೆನ್ನಲ್ಲೇ ಜೈಲಿನಲ್ಲಿ ಶಶಿಕಲಾ ಹ್ಯಾಪಿ ಮೂಡ್ ನಲ್ಲಿದ್ದಾರೆ ಎನ್ನಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ದಿವಂಗತ ಜಯಲಲಿತಾ ಅವರ ಬಲಗೈ ಭಂಟರAತಿದ್ದರು ಶಶಿಕಲಾ. ಜಯಲಲಿತಾ ಮೃತಪಟ್ಟ ಬೆನ್ನಲ್ಲೇ ಶಶಿಕಲಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈಗ ಅವರು ಜೈಲಿನಿಂದ ಹೊರ ಬರುವ ಸುದ್ದಿ ಹರಿದಾಡುತ್ತಿದೆ.
ಮುಂದಿನ ವರ್ಷ ಅಂದರೆ 2021 ಮೇ ತಿಂಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಸದ್ಯ ಎಡಿಐಎಂಕೆ ಪಕ್ಷ ಅಧಿಕಾರದಲ್ಲಿದ್ದು, ಇ.ಡಿ.ಪಳನಿಸ್ವಾಮಿ ಮುಖ್ಯಮಂತ್ರಿ ಆಗಿದ್ದರೆ, ಒ.ಪನ್ನೀರಸೆಲ್ವಂ ಡಿಸಿಎಂ ಆಗಿದ್ದಾರೆ. ಈ ಇಬ್ಬರೂ ಶಶಿಕಲಾ ವಿರುದ್ಧ ಬಂಡೆದ್ದು ಎಐಡಿಎಂಕೆಯಿAದ ಶಶಿಕಲಾ ಅವರನ್ನು ಹೊರಹಾಕಿದ್ದಾರೆ. ಜಯಲಲಿತಾ ನಿಧನರಾಗುತ್ತಿದ್ದಂತೆ ಎರಡು ವರ್ಷಗಳ ಹಿಂದೆ ತಮಿಳುನಾಡು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು.
ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾ ಎಂಟ್ರಿಯಾದರೆ ಮತ್ತೆ ರಾಜಕೀಯದಲ್ಲಿ ಕೋಲಾಹಲ ಉಂಟಾಗಬಹುದೆAಬ ಲೆಕ್ಕಾಚಾರ ಸ್ಥಳೀಯ ಪಕ್ಷಗಳಲ್ಲಿ ಕಂಡು ಬರುತ್ತಿದೆ. ಜಯಲಲಿತಾ ಜೀವಂತರಿದ್ದಾಗಲೇ ರಾಜಕಾರಣಿಗಳನ್ನು ತನ್ನ ತುದಿ ಬೆರಳಲ್ಲಿ ಆಟವಾಡಿಸುತ್ತಿದ್ದ ಶಶಿಕಲಾ, ಪರಪ್ಪನ ಅಗ್ರಹಾರ ಜೈಲು ಸೇರುವ ದಿನ ಜಯಲಲಿತಾರ ಸಮಾಧಿ ಮೇಲೆ ಶಶಿಕಲಾ ಮೂರು ಬಾರಿ ಬಾರಿಸಿ ಶತಥ ಮಾಡಿದ್ದನ್ನು ತಮಿಳುನಾಡಿನ ಜನತೆ ಇನ್ನೂ ಮರೆತಿಲ್ಲ. ಹೀಗಾಗಿ ಚಿನ್ನಮ್ಮ ಮತ್ತೆ ಸಕ್ರಿಯ ರಾಜಕಾರಣಕ್ಕೆ ಧುಮುಕಿದರೆ ಏನಾಗಬಹುದು ಎಂಬ ಆತಂಕ ವಿರೋಧಿ ಪಾಳೆಯವನ್ನು ಕಾಡುತ್ತಿದೆಯಂತೆ. .
ವಿಧಾನಸಭೆ ಚುನಾವಣೆ ಎರಡು ತಿಂಗಳ ಮೊದಲು ಶಶಿಕಲಾ ಬಿಡುಗಡೆ ಆಗಬೇಕು. ಆದರೆ, 10 ತಿಂಗಳ ಮೊದಲೇ ಬಿಡುಗಡೆ ಆಗಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಒಂದು ವೇಳೆ ಅವಧಿಗೆ ಮುನ್ನವೇ ಚಿನ್ನಮ್ಮ ಬಿಡುಗಡೆಯಾದರೆ ಎಐಎಡಿಎಂಕೆ ಸರ್ಕಾರಕ್ಕೆ ಭಾರಿ ಹಿನ್ನೆಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅವಧಿಗೆ ಮುನ್ನ ಬಿಡುಗಡೆ ಇಲ್ಲ..!
2017 ಫೆಬ್ರವರಿ 14 ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಚಿನ್ನಮ್ಮ ಅವರ ಕಾರಾಗೃಹ ವಾಸದ ಅವಧಿ 2021 ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ಕೊನೆಗೊಳ್ಳಲಿದೆ. ಯಾವುದೇ ಕಾರಣಕ್ಕೂ ಅವಧಿಗೂ ಮುನ್ನ ಶಶಿಲಾ ನಟರಾಜನ್ ಬಿಡುಗಡೆ ಇಲ್ಲ. ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆಗೆ ಪಟ್ಟಿ ಸಹ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ 55 ಮಂದಿ ಹೆಸರಿದ್ದು, ಐವರು ಮಹಿಳೆಯರಿದ್ದಾರೆ. ಈ ಪಟ್ಟಿಯಲ್ಲಿ ಶಶಿಕಲಾ ನಟರಾಜನ್ ಹೆಸರು ಕೊಟ್ಟಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ. ಹೀಗಾಗಿ ಚಿನ್ನಮ್ಮ ಶೀಘ್ರ ಬಿಡುಗಡೆ ಆಗೋದು ಅನುಮಾನ ಎನ್ನಲಾಗುತ್ತಿದೆ.